ADVERTISEMENT

ಸುಕ್ರಿ ಕಾಯಕ ಸಂಸ್ಕೃತಿ ಪ್ರತೀಕ: ಕಾಯ್ಕಿಣಿ 

ಹಾಲಕ್ಕಿ ಕೋಗಿಲೆ ಗ್ರಂಥ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:39 IST
Last Updated 23 ಫೆಬ್ರುವರಿ 2020, 13:39 IST
ಅಂಕೋಲಾ ತಾಲ್ಲೂಕಿನ ಬಡಗೇರಿಯಲ್ಲಿ ಜನಪದ ಕೋಗಿಲೆ ಸುಕ್ರಿ ಗೌಡ ಅವರ ಬದುಕಿನ ಚಿತ್ರಣವುಳ್ಳ ಪುಸ್ತಕ ಬಿಡುಗಡೆಗೊಳಿಸಿದ ಜಯಂತ ಕಾಯ್ಕಿಣಿ
ಅಂಕೋಲಾ ತಾಲ್ಲೂಕಿನ ಬಡಗೇರಿಯಲ್ಲಿ ಜನಪದ ಕೋಗಿಲೆ ಸುಕ್ರಿ ಗೌಡ ಅವರ ಬದುಕಿನ ಚಿತ್ರಣವುಳ್ಳ ಪುಸ್ತಕ ಬಿಡುಗಡೆಗೊಳಿಸಿದ ಜಯಂತ ಕಾಯ್ಕಿಣಿ   

ಅಂಕೋಲಾ: ‘ಬದುಕನ್ನು ಸುಂದರಮಯವಾಗಿಸುವ ಅಪೂರ್ವ ಸಂಸ್ಕೃತಿ ಜನಪದವಾಗಿದ್ದು, ಸುಕ್ರಿ ಗೌಡ ಇಂತಹ ಸಾವಿರಾರು ಹಾಡುಗಳಿಗೆ ದನಿಯಾಗುವ ಮೂಲಕ ನಮ್ಮ ನಡುವೆ ಜನಪದ ಕಣಜದಂತೆ ಬದುಕುತ್ತಿದ್ದಾರೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಅವರು ಭಾನುವಾರ ಬಡಗೇರಿಯ ಮನೆಯಂಗಳದಲ್ಲಿ ಜನಪದ ಕೋಗಿಲೆ ಸುಕ್ರಿ ಗೌಡ ಅವರ ಬದುಕಿನ ಚಿತ್ರಣವುಳ್ಳ, ಕವಯತ್ರಿ ಅಕ್ಷತಾ ಕೃಷ್ಣಮೂರ್ತಿ ಸಂಪಾದಕತ್ವದ ‘ಹಾಲಕ್ಕಿ ಕೋಗಿಲೆ’ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಯುವ ಪೀಳಿಗೆ ಜನಪದ ಹಾಡುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕವಿಯಾದವ ಅವ್ಯಕ್ತವನ್ನು ಆಲಿಸಬಲ್ಲ. ಅಕ್ಷತಾ ಕೃಷ್ಣಮೂರ್ತಿ ಈ ಗ್ರಂಥದ ಮೂಲಕ ಸುಕ್ರಿ ಗೌಡರ ಜೀವನ ಚಿತ್ರಣವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕೃಷ್ಣಮೂರ್ತಿ ನಾಯಕ ಸ್ವಾಗತಿಸಿದರು. ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ವಿಠ್ಠಲದಾಸ ಕಾಮತ್, ಲೇಖಕಿ ಡಾ. ಪ್ರೀತಿ ಭಂಡಾರಕರ್, ಸ್ಮಿತಾ ಕಾಯ್ಕಿಣಿ, ಲತಾ ವಿ. ಕಾಮತ್ ಉಪಸ್ಥಿತರಿದ್ದರು.

ADVERTISEMENT

ಲೇಖಕಿ ಅಕ್ಷತಾ ಅವರ ವತಿಯಿಂದ ಸುಕ್ರಿ ಗೌಡರಿಗೆ ಬಟ್ಟೆ, ಹಾಸಿಗೆ ಬಟ್ಟೆ, ಪಾತ್ರೆ ಮತ್ತಿತರ ಮನೆಬಳಕೆ ಸಾಮಗ್ರಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.