ADVERTISEMENT

ಜೊಯಿಡಾ ತಾಲ್ಲೂಕಿನ ಶಿವಪುರ ನಡುಗಡ್ಡೆ: ಪ್ರವಾಸಿಗರಿಗೆ ಆಕರ್ಷಣೆ ತೂಗು ಸೇತುವೆ

ನಡುಗಡ್ಡೆಗೆ ನೂರಾರು ಜನರ ಭೇಟಿ

ಜ್ಞಾನೇಶ್ವರ ಜಿ.ದೇಸಾಯಿ
Published 11 ಮೇ 2019, 19:46 IST
Last Updated 11 ಮೇ 2019, 19:46 IST
ಜೊಯಿಡಾ ತಾಲ್ಲೂಕಿನ ಶಿವಪುರ ನಡುಗಡ್ಡೆಗೆ ನಿರ್ಮಿಸಲಾಗಿರುವ ತೂಗುಸೇತುವೆ 
ಜೊಯಿಡಾ ತಾಲ್ಲೂಕಿನ ಶಿವಪುರ ನಡುಗಡ್ಡೆಗೆ ನಿರ್ಮಿಸಲಾಗಿರುವ ತೂಗುಸೇತುವೆ    

ಜೊಯಿಡಾ:ದಾರಿಯುದ್ದಕ್ಕೂ ದಟ್ಟಡವಿ. ಮರಗಳ ತಣ್ಣನೆಯ ನೆರಳಿನಲ್ಲಿ ಸಾಗುತ್ತಿದ್ದರೆ ಹಕ್ಕಿಗಳ ಕಲರವ ಹಾಗೂ ತಂಗಾಳಿ ಮುದ ನೀಡುತ್ತದೆ. ಹಾಗೇಮುಂದೆ ಸಾಗಿದಾಗಶಿವಪುರ ನಡುಗಡ್ಡೆ ಕೈಬೀಸಿ ಕರೆಯುತ್ತದೆ.

ಜೊಯಿಡಾದಿಂದ 46 ಕಿ.ಮೀ ದೂರದಲ್ಲಿರುವ ಈ ಸ್ಥಳ ಈಗ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಳವಿಗೆ ಭೇಟಿ ನೀಡುವವರು ಈ ಜಾಗಕ್ಕೆ ಹೋಗುವುದು ಸುಲಭವಾಗಿದೆ. ಇಲ್ಲಿಕಾಳಿ ನದಿಗೆ ನಿರ್ಮಿಸಲಾದತೂಗುಸೇತುವೆ ಫೋಟೊಗ್ರಫಿ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ.

ಪ್ರವಾಸೋದ್ಯಮ ಇಲಾಖೆ ಹಾಗೂ ನಬಾರ್ಡ್ ಸಹಯೋಗದಲ್ಲಿ ಇದನ್ನು 2015ರಲ್ಲಿ ನಿರ್ಮಿಸಲಾಗಿದೆ. 234 ಮೀಟರ್ ಉದ್ದ ಹಾಗೂ 1.50 ಮೀಟರ್ ಅಗಲದ ಸೇತುವೆಗೆ₹ 3 ಕೋಟಿ ವೆಚ್ಚವಾಗಿದೆ.ಇದರ ಮೇಲೆ ಏಕಕಾಲದಲ್ಲಿ 100 ಜನ ಸಂಚರಿಸಬಹುದು. ಇಲ್ಲಿಂದ ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೂ ತೆರಳಬಹುದು. ಹತ್ತಿರದಲ್ಲಿರುವ ಸಿಂಥೇರಿ ರಾಕ್ಸ್, ಆಕಳಗವಿ ಗುಹೆ, ಅಣಶಿ ನೇಚರ್ಕ್ಯಾಂಪ್‌ಗಳಿಗೂ ಹೋಗಬಹುದು.

ADVERTISEMENT

ದಾರಿಯ ಮಧ್ಯೆಉಳವಿ ಚನ್ನಬಸವೇಶ್ವರ ದೇವಸ್ಥಾನವಿದೆ.ಸಾವಿರಾರು ಪ್ರವಾಸಿಗರು ತಮ್ಮ ಬಿಡುವಿನ ಸಮಯದಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯಲು ಬರುತ್ತಿದ್ದಾರೆ.

ಹೋಗುವುದು ಹೇಗೆ?: ಜೊಯಿಡಾಯಿಂದ ಉಳವಿವರೆಗೆ ಬಸ್ ಸಂಚಾರವಿದೆ. ಅಲ್ಲಿಂದ ಖಾಸಗಿ ಬಾಡಿಗೆ ಜೀಪ್‌ನಲ್ಲಿ ಪ್ರಯಾಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.