ಶಿರಸಿ: ಎರಡು ದಿನಗಳಿಂದ ಆಗಾಗ ಸುರಿದು ಮರೆಯಾಗುತ್ತಿದ್ದ ಮಳೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆಯಿಂದಲೇ ಆರಂಭವಾಗಿ ದಿನವಿಡೀ ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಯಿತು.
ದಿನವಿಡೀ ಮೋಡ ಮುಸುಕಿ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಮಳೆ ನಿಲ್ಲುವ ಲಕ್ಷಣ ಕಂಡು ಬರದೇ ಇದ್ದುದರಿಂದ ಜನರು ಛತ್ರಿ ಹಿಡಿದುಕೊಂಡು ಓಡಾಡಿದರು. ಚಳಿಯ ವಾತಾವರಣ ಇದ್ದುದರಿಂದ ಸ್ವೆಟರ್, ಜಾಕೆಟ್‍ಗಳನ್ನೂ ಧರಿಸಿದ್ದು ಕಂಡು ಬಂತು.
ನಿರಂತರ ಮಳೆಗೆ ನಗರದ ಗಣೇಶನಗರ ಪುಟ್ಟನಮನೆ ರಸ್ತೆಯಲ್ಲಿರುವ ಸೀತಾ ದೇವಾಡಿಗ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿತವಾಗಿದೆ. ಘಟನೆ ವೇಳೆ ಗೋಡೆ ಪಕ್ಕ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ನಗರದ ಕೆಲವೆಡೆ ರಸ್ತೆ ಮೇಲೆ ಹೊಂಡಗುಂಡಿಗಳಿದ್ದು, ಮಳೆ ನೀರಲ್ಲಿ ಮುಚ್ಚಿ ವಾಹನ ಸವಾರರಿಗೆ ತೀವ್ರ ಸಮಸ್ಯೆಗೆ ಕಾರಣವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.