ADVERTISEMENT

ಹೆಬ್ಬಾರರಿಂದ ಸೋಲಾರ್ ದೀಪ ಕೊಡುಗೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 13:09 IST
Last Updated 29 ಫೆಬ್ರುವರಿ 2020, 13:09 IST
ಶ್ರೀನಿವಾಸ ಹೆಬ್ಬಾರ್
ಶ್ರೀನಿವಾಸ ಹೆಬ್ಬಾರ್   

ಶಿರಸಿ: ಇಲ್ಲಿನ ಚಿಪಗಿ ವೃತ್ತದಿಂದ ಕ್ರೀಡಾಂಗಣ ಕ್ರಾಸ್‌ವರೆಗಿನ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ಮತ್ತು ಅನೈತಿಕ ಚಟುವಟಿಕೆ ತಡೆಗಟ್ಟಲು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು ಸ್ವಂತ ವೆಚ್ಚದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿದ್ದಾರೆ.

ನಿರ್ಜನ ಪ್ರದೇಶವಾಗಿರುವ ಈ ರಸ್ತೆಯ ಇಕ್ಕೆಲಗಳಲ್ಲಿ ದಿನ ಬೆಳಗಾಗುವಷ್ಟರಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿರುತ್ತಿತ್ತು. ಅದನ್ನು ಸ್ವಚ್ಛಗೊಳಿಸಿದ್ದ ಹೆಬ್ಬಾರ್, ಕಸ ತಂದು ಎಸೆಯುತ್ತಿದ್ದ ಅನಾಗರಿಕರನ್ನು ಹಲವಾರು ಹಿಡಿದು, ಅವರಿಂದಲೇ ಆ ಕಸವನ್ನು ಎತ್ತಿಸಿದ್ದರು. ಇದರಿಂದ ಈ ಭಾಗದಲ್ಲಿ ಅಕ್ರಮವಾಗಿ ಕಸ ಎಸೆಯುವ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ, ವಾಯುವಿಹಾರಕ್ಕೆ ಹೋಗುವವರು ಖುಷಿಯಿಂದ ಈ ಮಾರ್ಗದಲ್ಲಿ ಓಡಾಡುತ್ತಿದ್ದರು. ಆದರೆ, ಸಂಜೆಯ ವೇಳೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ದೂರು ಬಂದ ಹಿನ್ನೆಲೆಯಲ್ಲಿ, ಎಂಟು ಸೋಲಾರ್ ದೀಪಗಳನ್ನು ಅಳವಡಿಸಿರುವ ಅವರು, ದಾರಿಹೋಕರ ಭಯವನ್ನು ನಿವಾರಿಸಿದ್ದರೆ.

‘ನಗರದ ಹುಬ್ಬಳ್ಳಿ ರಸ್ತೆ, ಚಿಪಗಿ ರಸ್ತೆ ಸೇರಿದಂತೆ ಇತರ ಕಡೆ ಅಕ್ರಮವಾಗಿ ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ಕಾರ್ಯಪಡೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ರಾತ್ರಿ ವೇಳೆ ಕಸ ಹಾಕುವವರನ್ನು ಹಿಡಿಯಲು ಅನುಕೂಲವಾಗುವಂತೆ ಮತ್ತು ಭಯಮುಕ್ತವಾಗಿ ಜನರು ಸಂಚರಿಸಲು ಅನುಕೂಲವಾಗುವಂತೆ ದೀಪ ಅಳವಡಿಸಲಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.