ADVERTISEMENT

ಉತ್ತರ ಕನ್ನಡ | ವಿದ್ಯುತ್ ಕಾಯ್ದೆಗೆ ತಿದ್ದುಪಡಿ ವಿರುದ್ಧ ಕರಾಳ ದಿನಾರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 12:29 IST
Last Updated 1 ಜೂನ್ 2020, 12:29 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೆಸ್ಕಾಂ ಗುತ್ತಿಗೆ ನೌಕರರು ಸೋಮವಾರ ಕಾರವಾರದಲ್ಲಿ ಫಲಕ ಪ್ರದರ್ಶಿಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೆಸ್ಕಾಂ ಗುತ್ತಿಗೆ ನೌಕರರು ಸೋಮವಾರ ಕಾರವಾರದಲ್ಲಿ ಫಲಕ ಪ್ರದರ್ಶಿಸಿದರು   

ಕಾರವಾರ: ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ಮಾಡಲು ಉದ್ದೇಶಿಸಿರುವ ತಿದ್ದುಪಡಿಯನ್ನುರದ್ದುಗೊಳಿಸಬೇಕು. ಈವಲಯದ ಖಾಸಗೀಕರಣ ಕೈಬಿಡಬೇಕುಎಂದು ಆಗ್ರಹಿಸಿಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘ ಹಾಗೂ ಹೆಸ್ಕಾಂ ಗುತ್ತಿಗೆ ನೌಕರರ ಸಂಘದ ಸದಸ್ಯರು ಸೋಮವಾರ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ದೇಶದಾದ್ಯಂತ ಎ.ಐ.ಯು.ಟಿ.ಯು.ಸಿನೇತೃತ್ವದಲ್ಲಿ ಕರಾಳ ದಿನಾಚರಣೆ ಮಾಡಲಾಯಿತು. ಇದೇ ರೀತಿ, ಕಾರವಾರದಲ್ಲೂನೌಕರರು, ಗುತ್ತಿಗೆ ಕಾರ್ಮಿಕರು, ಪ್ರಸರಣ, ಸರಬರಾಜು ಸ್ಟೇಷನ್‌ಗಳ ಮತ್ತು ಕಚೇರಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಸೂಚಿಸಲಾಯಿತು.ಇದೇವೇಳೆ,ಕಾರ್ಯ ಪಾಲಕ ಎಂಜಿನಿಯರ್ಮೂಲಕಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಏಪ್ರಿಲ್ ತಿಂಗಳಿನಿಂದ ಪರಿಷ್ಕೃತ ಕನಿಷ್ಠ ವೇತನ ಜಾರಿಮಾಡಬೇಕು. ಲಾಕ್‌ಡೌನ್ಅವಧಿಯಲ್ಲಿ ಹೆಚ್ಚುವರಿ ವೇತನ ನೀಡಬೇಕು. ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು.ಪಿ.ಎಫ್.ನಲ್ಲಿ ನೌಕರರ ಪಾಲಿನ ಕಂತು ಕಡಿತಗೊಳಿಸದೇ ವೇತನದಲ್ಲಿ ಸೇರಿಸಿ ಪಾವತಿಸಬೇಕು. ಎಲ್ಲ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಬಾರದು ಎಂಬ ಬೇಡಿಕೆಯನ್ನೂ ಸಲ್ಲಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.