ADVERTISEMENT

ಅಂಕೋಲಾ | ರಸಪ್ರಶ್ನೆ: ರಾಜ್ಯಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:08 IST
Last Updated 25 ಆಗಸ್ಟ್ 2025, 6:08 IST

ಅಂಕೋಲಾ : ಹದಿಹರೆಯದಲ್ಲಿ ಎಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ನೈತಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಐ.ಸಿ.ಟಿ.ಸಿ ವಿಭಾಗದ ಆಪ್ತಸಮಾಲೋಚಕರಿಂದ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ನೀಡಲು ಈಗಾಗಲೇ ತರಬೇತಿ ನೀಡಲಾಗಿದೆ. ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನವರು ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಮಕ್ಕಳಿಗೆ ಆರೋಗ್ಯ ಕುರಿತು ತರಬೇತಿ ನೀಡಬಹುದಾಗಿದೆ ಎಂದು ಜಿಲ್ಲಾ ಏಡ್ಸ್‌ ಎಂಆ‍್ಯಂಡ್‌ ಇ ಅಧಿಕಾರಿ ಶ್ರೀಕಾಂತ ಹಿರೇಮಠ ಹೇಳಿದರು.

ಪಟ್ಟಣದ ಜೈಹಿಂದ್‌ ಹೈಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಸ್‌ನ್‌ ಸೊಸೈಟಿ ಬೆಂಗಳೂರು, ಸ್ಪರ್ಷ ಸಂಸ್ಥೆ ಕುಮಟಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಜಿಲ್ಲಾ ಏಡ್ಸ್‌ ನಿಯಂತ್ರಣ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲೆ ಮತ್ತು ಪ್ರಥಮ ಪಿಯುಸಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕಾರವಾರದ ಸೆಂಟ್‌ ಜೋಸೆಫ್ ಪಿಯು ಕಾಲೇಜಿನ ಪ್ರಾಚಾರ್ಯ ಫಾದರ್‌ ಸ್ಟ್ಯಾನಿ ಪಿಂಟೊ ಮಾತನಾಡಿ, ಹದಿಹರೆಯದಲ್ಲಿ ಮೂಡುವ ಕೂತುಹಲವನ್ನು ಪ್ರಯೋಗಾತ್ಮಕಾಗಿ ನೋಡಲು ನೈತಿಕತೆಯನ್ನು ಮೀರಿದ ದಾರಿ ಹಿಡಿಯಬಾರದು. ಇಂತಹ ಕಾರ್ಯಕ್ರಮಗಳಿಂದ ಎಚ್ಐವಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಕ್ಕಳಿಗೆ ಅನೂಕೂಲವಾಗಲಿದೆ ಎಂದರು.

ADVERTISEMENT

ಜೈಹಿಂದ ಹೈಸ್ಕೂಲ್ ಮುಖ್ಯ ಶಿಕ್ಷಕ ಪ್ರಭಾಕರ ಬಂಟ, ಜಿಲ್ಲಾ ಮೇಲ್ವಿಚಾರಕ ನೀಲೇಶ ನಾಯ್ಕ, ಅಂಕೋಲಾ ಐ.ಸಿ.ಟಿ.ಸಿ ವಿಭಾಗದ ಆಪ್ತ ಸಮಾಲೋಚಕಿ ರಾಜೇಶ್ವರಿ ಕೀರ್ಲೋಸ್ಕರ್‌, ಜಿಲ್ಲಾ ಲೆಕ್ಕಾಧಿಕಾರಿಗಳಾದ ವಿನೋದ ಹೊನ್ನಾವರ, ಐ.ಸಿ.ಟಿ.ಸಿ ಕುಮಟಾದ ಆಪ್ತ ಸಮಾಲೋಚಕ ಪ್ರದೀಪ ನಾಯ್ಕ ಇದ್ದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಹೊನ್ನಾವರ ಎಸ್.ಡಿ.ಎಂ ಪಿ.ಯು. ಕಾಲೇಜಿನ ವಿದ್ಯಾರ್ಥಿಳಾದ ಧನ್ಯಾ ಗಣಪತಿ ಭಟ್‌, ರಕ್ಷಿತಾ ರಮೇಶ ನಾಯ್ಕ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಕುಮಟಾದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿಧ್ಯಾರ್ಥಿಗಳಾದ ಸವಿತಾ ಸಾರಂಗ, ಸಹನಾ ಹೆಗಡೆ ದ್ವಿತೀಯ ಮತ್ತು ಕಡತೋಕಾದ ಜನತಾ ವಿದ್ಯಾಲಯದ ವಿನುತಾ ಪರಮೇಶ್ವರ ಗೌಡ ಮತ್ತು ಸೌಮ್ಯ ನಾರಾಯಣ ಮುಕ್ರಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.