ADVERTISEMENT

ದಾಂಡೇಲಿ: ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:26 IST
Last Updated 15 ಮೇ 2025, 12:26 IST
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದ ಕೆಪಿಸಿ ಕಾಲೊನಿಯಲ್ಲಿ ಬುಧವಾರ ಕಾಣಿಸಿಕೊಂಡಿದ್ದ 13 ಅಡಿ ಹೆಬ್ಬಾವನ್ನು ಉಗರ ತಜ್ಞರು ರಕ್ಷಿಸಿದರು
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದ ಕೆಪಿಸಿ ಕಾಲೊನಿಯಲ್ಲಿ ಬುಧವಾರ ಕಾಣಿಸಿಕೊಂಡಿದ್ದ 13 ಅಡಿ ಹೆಬ್ಬಾವನ್ನು ಉಗರ ತಜ್ಞರು ರಕ್ಷಿಸಿದರು   

ದಾಂಡೇಲಿ: ತಾಲ್ಲೂಕಿನ ಅಂಬಿಕಾನಗರದ ಕೆ.ಪಿ.ಸಿ ಕಾಲೊನಿಯ ಮನೆಯೊಂದರ ಬಳಿ ಬೃಹತ್ ಗಾತ್ರದ ಹೆಬ್ಬಾವು  ಬುಧವಾರ ರಾತ್ರಿ ಕಾಣಿಸಿಕೊಂಡಿತು.

ಸಂಗೀತಾ ಮಿರಾಶಿ ಎಂಬುವರು ಮನೆ ಬಾಗಿಲಲ್ಲಿ 13 ಅಡಿ ಉದ್ದ ಹೆಬ್ಬಾವು ಕಾಣಿಸಿಕೊಂಡಿತ್ತು. ಮನೆಯವರು ಇದನ್ನು ಗಮನಿಸಿ, ತಕ್ಷಣವೇ ಉರಗ ರಕ್ಷಕ ಅಸ್ಲಾಂ ಮತ್ತು ವಿನೋದ ಅವರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಇಬ್ಬರೂ, ಹೆಬ್ಬಾವನ್ನು ರಕ್ಷಿಸಿ, ಕಾಡಿಗೆ ಬಿಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.