ಹಳಿಯಾಳ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡೆಯ ಹವ್ಯಾಸ ಹೊಂದಿರಬೇಕು ಎಂದು ಬೆಂಗಳೂರು ಆರ್ಕ್ಟಿಟರ್ನ್ ಸೊಲ್ಯೂಷನ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಸನ್ನ ಕುಲಕರ್ಣಿ ಹೇಳಿದರು.
ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ಬಿಸಿಎ ಮತ್ತು ಬಿಕಾಂ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಪ್ರಾರಂಭೋತ್ಸವ ‘ಲಕ್ಷ್ಯ್-2024’ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ. ದೇಶದಲ್ಲಿ ತಾಂತ್ರಿಕತೆ ಬೆಳದಂತೆ ಓದ್ಯೋಗಿಕ ಕ್ರಾಂತಿ ಆಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಣ ಸಾಧನೆಯ ದಾರಿಯಾಗಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ, ಪ್ರಾಚಾರ್ಯ ಶ್ರೀನಿವಾಸ ಪ್ರಭು ಲಕ್ಷ್ಯ, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ತೇಜಸ್ವಿನಿ ಮಠಪತಿ, ಮಿನಾಜ್ ಶೇಖ್, ಶ್ಲೋಕಾ ತೇಗುರ ಮಾತನಾಡಿದರು.
ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಾದ ಶ್ಯಾಂಡಿಲ್ಯಾ ಕೊಚ್ಚಾರಿ, ಅಲನ್ ಲೊಪಿಸ್, ಲಕ್ಷ್ಮಿ ಅಂಗ್ರೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಉನ್ನತಿ ರವಿಂದ್ರ ಪ್ರಾರ್ಥಿಸಿದರು, ಮಿಸ್ಬಾ ಸ್ವಾಗತಿಸಿದರು, ಸುಜಲ್ ಸಾಮಂತ ನಿರೂಪಿಸಿದರು.
ಉಪನ್ಯಾಸಕರಾದ ದೀಪಾ ನಾಯ್ಕ, ನಮೃತಾ ಗುರವ, ಸಂಗೀತಾ ಪ್ರಭು, ಮಾಧವ ಸುರತ್ಕರ, ಮಲ್ಲಿಕಾರ್ಜುನ ಕಾಜಗಾರ, ಮೆಹ್ತಾಬ್ ಶೇಖ, ವರುನ್ ಪಾಟಿಲ, ಪ್ರಗತಿ ಲಕ್ಕುಂಡಿ, ಸ್ವಾತಿ ಮೊರೆ, ಅಕ್ಷತಾ ಹುಲಿಕೇರಿ, ಎಂ.ವಿ. ಕಿರಣಕುಮಾರ, ಮಂಜುನಾಥ ಭೋವಿ ಮತ್ತು ವಿನಾಯಕ ಕಮ್ಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.