ಎನ್.ಎಸ್.ಹೆಗಡೆ
ಯಲ್ಲಾಪುರ: ರಾಜ್ಯ ಸರ್ಕಾರದ ತುಷ್ಟೀಕರಣ ನೀತಿ, ಭ್ರಷ್ಷಾಚಾರ, ಬೆಲೆ ಏರಿಕೆ ಹಾಗೂ ಪರಿಶಿಷ್ಟರ ಹಣದ ದುರ್ಬಳಕೆ ವಿರುದ್ದ ಬಿಜೆಪಿ ಜನಾಕ್ರೋಶ ಯಾತ್ರೆ ಆಯೋಜಿಸಿದ್ದು, ಏಪ್ರಿಲ್ 11ರಂದು ಯಲ್ಲಾಪುರಕ್ಕೆ ಯಾತ್ರೆ ಬರಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ ತಿಳಿಸಿದರು.
ಪಟ್ಟಣದ ಟಿ.ಎಂ.ಎಸ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನಾಕ್ರೋಶ ಯಾತ್ರೆಯ ಅಂಗವಾಗಿ ಪಟ್ಟಣದ ಗ್ರಾಮದೇವಿ ದೇವಸ್ಥಾನದಿಂದ ವೈಟಿಎಸ್ಎಸ್ ಮೈದಾನದವರೆಗೆ ಮೆರವಣಿಗೆ ನಡೆಯಲಿದ್ದು , ಅಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.
ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ. ಜಿಲ್ಲೆಯ ಸಂಸದರು, ಶಾಸಕರು ಭಾಗವಹಿಸುವರು.
ಜನರು ಕಾಂಗ್ರೆಸ್ ಸರ್ಕಾರದಿಂದ ರೋಸಿ ಹೋಗಿದ್ದು, ಅಭಿವೃದ್ಧಿ ಕುಸಿದಿದೆ. ಭ್ರಷ್ಷಾಚಾರ ಮಿತಿಮೀರಿದೆ. ಜನರ ಸಮಸ್ಯೆ ಗಮನಿಸಿ ಪಕ್ಷ ಹೋರಾಟಕ್ಕೆ ಇಳಿದಿದೆ. ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಪಕ್ಷದ ಪ್ರಮುಖರಾದ ಅಶೋಕ ಚಲವಾದಿ, ಗುರುಪ್ರಸಾದ ಹೆಗಡೆ, ಶಿವಾಜಿ ನಸ್ರಾಣಿ, ಹರಿಪ್ರಕಾಶ ಕೋಣೆಮನೆ, ಚಂದ್ರಕಲಾ ಭಟ್, ಪ್ರಸಾದ ಹೆಗಡೆ, ಕೆ.ಟಿ.ಹೆಗಡೆ, ಗಣಪತಿ ಮಾನಿಗದ್ದೆ, ನಾರಾಯಣ ಭಟ್ ಅಗ್ಗಾಶಿಕುಂಬ್ರಿ, ಉಮೇಶ ಭಾಗ್ವತ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.