ಅಂಕೋಲಾದಲ್ಲಿ ಸಿ.ಜಿ.ಕೆ ರಂಗ ಪುರಸ್ಕಾರವನ್ನು ರಂಗಕರ್ಮಿ ಜಯಂತ ಗಾವಡ ಅವರಿಗೆ ನೀಡಿ ಗೌರವಿಸಲಾಯಿತು
ಅಂಕೋಲಾ: ಜೋಯಿಡಾ ಪ್ರದೇಶದ ಅತ್ಯಂತ ಕುಗ್ರಾಮಾದ ರಂಗಕರ್ಮಿಯನ್ನು ಹುಡುಕಿ ಸಿ.ಜಿ.ಕೆ ರಂಗ ಪುರಸ್ಕಾರ ನೀಡಿರುವುದು ಶ್ಲಾಘನೀಯವಾದದ್ದು. ರಂಗಭೂಮಿ ಕ್ಷೇತ್ರವನ್ನು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಬೆಳಸಿದ ಸಿ.ಜಿ.ಕೆ ಅವರಿಗೆ ನಿಜವಾದ ಗೌರವ ಸಲ್ಲಿಸದಂತಾಗಿದೆ ಎಂದು ವೈದ್ಯ ಸಂಜು ನಾಯಕ ಹೇಳಿದರು.
ನಗರದ ಪಿ.ಎಂ. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಜಿ.ಕೆ ರಂಗ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ರಮಾನಂದ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿ.ಜಿ.ಕೆ ಅವರು ರಂಗಭೂಮಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದವರು. ಅವರ ಹೆಸರಿನಲ್ಲಿ ಸಂಗಾತಿ ರಂಗಭೂಮಿ ಪ್ರತಿ ವರ್ಷ ಸಾಧಕರಿಗೆ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಸಿ.ಜಿ.ಕೆ ರಂಗ ಪುರಸ್ಕಾರವನ್ನು ರಂಗಕರ್ಮಿ ಜಯಂತ ಗಾವಡ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಸಂಘಟಕರಾದ ಕೆ.ಆರ್.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ಅಧ್ಯಕ್ಷರಾದ ಅರುಣ್ ಶೆಟ್ಟಿ, ರಾಜು ಹರಿಕಂತ್ರ, ಉಪನ್ಯಾಸಕ ಉಲ್ಲಾಸ ಹುದ್ದಾರ, ಲಕ್ಷ್ಮಣ ಹುಲಸ್ವಾರ, ವಿನಾಯಕ ಶೆಟ್ಟಿ, ಸಿಂಚನ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.