ದಾಂಡೇಲಿ: ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಸಂಸ್ಕೃತಿಯ ಅಡಿಪಾಯ, ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಉತ್ತಮ ಮಾಧ್ಯಮ ಎಂದು ಸಮಾಜ ಸುಧಾರಕರ ರೋಷನ್ ನೇತ್ರಾವಳಿ ಹೇಳಿದರು.
ದಾಂಡೇಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಸಾರಥ್ಯದಲ್ಲಿ ಜಿಲ್ಲಾ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ತಿಂಗಳುವಾರು ಸಾಹಿತ್ಯ ಸರಣಿ ಕಾರ್ಯಕ್ರಮದಡಿ ಭಾವ ತರಂಗ ಭಾವಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಮಣ್ಣಿನಲ್ಲಿ ಸಂಸ್ಕೃತಿ, ಸಂವೇದನೆಗಳು ಎಲ್ಲವನ್ನೂ ಒಳಗೊಂಡಿದೆ. ನಾವು ಮೊದಲಿಗೆ ಕನ್ನಡದಲ್ಲೇ ಕನಸು ಕಾಣಬೇಕು, ಯೋಚಿಸಬೇಕು. ನಂತರ ಬೇರೆಯದ್ದನ್ನೂ ಅರಗಿಸಿಕೊಳ್ಳಬೇಕು ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಮಾತನಾಡಿ, ಭಾವನೆಗಳಿಗೆ ಪ್ರಾಮುಖ್ಯತೆ ನೀಡುವ ಈ ಭಾವಗೀತೆಗಳು ಸೂಕ್ಷ್ಮ ಮತ್ತು ಆಳವಾದ ಅರ್ಥವಿರುತ್ತದೆ. ದೇಶಭಕ್ತಿ, ನಾಡು, ಭಾಷೆ, ಪ್ರಕೃತಿ, ಪ್ರೇಮ, ವಿರಹ, ಪರಿಸರ ಪ್ರೀತಿ ಮಾನವೀಯತೆ, ಸಾಂಸ್ಕೃತಿಕ ಮೌಲ್ಯಗಳನ್ನು ಆಳವಾಗಿ ಸ್ಪರ್ಶಿಸುತ್ತವೆ ಎಂದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ ಅಧ್ಯಕ್ಷ ಮಹೇಶ್, ಆದಿವಾಸಿ ಮತ್ತು ಜಿಲ್ಲಾ ಸಾಪ ಕೋಶಾಧ್ಯಕ್ಷ ಮುರ್ತುಜಾಹುಸೇನ್ ಆನೆಹೊಸೂರ ಮಾತನಾಡಿದರು.
ಕಾರ್ಯಕ್ರಮದ ದಾಸೋಹಿಗಳಾದ ಜಯದೇವ ಶಿರಿಗೇರಿ ಮಾತನಾಡಿ, ನನ್ನ ತಂದೆ ಮಲ್ಲಿಕಾರ್ಜುನಪ್ಪ ಶಿರಿಗೇರಿ ಮತ್ತು ತಾಯಿ ನಾಗರತ್ನಮ್ಮ ಶಿರಿಗೇರಿ ಹೆಸರಿನಲ್ಲಿ ಈ ಕಾರ್ಯಕ್ರಮದ ದಾಸೋಹದ ಸೇವೆ ಸಲ್ಲಿಸಲು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಭಾವಗೀತೆ ಗಾಯನದಲ್ಲಿ ಶಮಿತ ದೇವಿದಾಸ ನಾಯ್ಕ-ಮುನಿಸು ತರವೇ ಮುಗುದೇ, ಸ್ನೇಹಾ ಪಿಳ್ಳೆ -ಅಮ್ಮ ನಿನ್ನ ಎದೆಯಾಳದಲ್ಲಿ, ಸಂಜೀವಿನಿ ನಾಯ್ಕ-ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ, ಖುಷಿ ಬಾವಿಕಟ್ಟಿ-ಹೇಗೆ ನಿನ್ನ ಹುಡುಕಲಿ, ಅದಿತಿ ಗೌಡ - ಅಂತರಂಗದ ಮೃದಂಗ, ಭೂಮಿಕಾ ಪೂಜಾರಿ - ಲೋಕದ ಕಣ್ಣಿಗೆ ರಾಧೆಯು ಕೂಡ, ಶ್ರೇಯಾ ಕುಂಬಾರ- ಮುಗಿಲ ಮಾರಿಗೆ, ವಿನೋದ ಕಾಳೆ-ಬಡವನಾದರೆ ಏನು ಪ್ರಿಯೆ, ಪರಸಪ್ಪ ಮಾಕನವರ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಗೀತೆಯನ್ನು ಹಾಡಿದರು.
ಕಸಾಪ ಸದಸ್ಯರಾದ ಎಸ್.ಎಸ್ .ಕುರ್ಡೇಕರ, ಎಸ್.ಎಸ್. ಪೂಜಾರ, ಎಂ.ಆರ್. ನಾಯಕ,ಬಾಬು ಜರಿ, ಉಜ್ವಲ ಸದಲಗಿ, ಶೋಭಾ ಮುದ್ದಪ್ಪನವರ, ಶಶಿಕಲಾ ಭಟ್, ವೆಂಕಮ್ಮ ಗಾವಂಕರ, ಕಲ್ಪನಾ ಪಾಟೀಲ ಇದ್ದರು. ಕಸಾಪ ಸದಸ್ಯೆ ಆಶಾ ದೇಶ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ಷಾ ಎಸ್ ಹಿರೇಮಠ ಪ್ರಾರ್ಥಿಸಿದರು. ಬಸವರಾಜ ನರಸಪ್ಪನವರ ಸ್ವಾಗತಿಸಿದರು. ಬೀರಪ್ಪ ಬಸಾಪುರ ನಿರೂಪಿಸಿದರು. ಶ್ರೀಮಂತ ಮದರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.