ಕಾರವಾರ: ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರರಿಗೆ ನೌಕಾದಳದ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವ ಮೀನುಗಾರರ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮೀನುಗಾರರು ಶುಕ್ರವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ದೂರು ನೀಡಿದರು.
‘ತಾಲ್ಲೂಕಿನ ಮುದಗಾ ಬಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಗಾಳಿಯ ರಭಸಕ್ಕೆ ದೋಣಿಗಳು ನೌಕಾನೆಲೆ ವ್ಯಾಪ್ತಿಯ ಸಮೀಪಕ್ಕೆ ಹೋಗುತ್ತಿವೆ. ಇದನ್ನೇ ನೆಪವಾಗಿಸಿಕೊಂಡು ನೌಕಾದಳದ ಸಿಬ್ಬಂದಿ ಮೀನುಗಾರರ ದೋಣಿಗಳನ್ನು ವಶಕ್ಕೆ ಪಡೆದು, ಮೀನುಗಾರರಿಗೆ ಹಲ್ಲೆ ಮಾಡುತ್ತಿದ್ದಾರೆ. ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲು ಸೂಚಿಸಬೇಕು’ ಎಂದು ಒತ್ತಾಯಿಸಿದರು.
‘ಮುದಗಾದ 6 ಮೀನುಗಾರರು ಗುರುವಾರ ಸಾಂಪ್ರದಾಯಿಕ ಪಾತಿ ದೋಣಿ ಬಳಸಿ ಮೀನುಗಾರಿಕೆ ನಡೆಸುವಾಗ ನೌಕಾನೆಲೆ ವ್ಯಾಪ್ತಿಯೊಳಗೆ ಮೀನುಗಾರರು ಬೀಸಿದ ಬಲೆ ತೇಲಿಹೋಗಿದೆ. ತಕ್ಷಣ ಮೀನುಗಾರರನ್ನು ಬಂಧಿಸಿದ್ದ ನೌಕಾದಳದ ಸಿಬ್ಬಂದಿ, ಪೊಲೀಸರ ವಶಕ್ಕೆ ಮೀನುಗಾರರನ್ನು ಒಪ್ಪಿಸಿದ್ದಾರೆ. ಆದರೆ, ದೋಣಿ ಇನ್ನಿತರ ಮೀನುಗಾರಿಕೆ ಪರಿಕರ ತಮ್ಮ ಸುಪರ್ಧಿಯಲ್ಲಿರಿಸಿಕೊಂಡಿದ್ದಾರೆ’ ಎಂದೂ ದೂರಿದರು.
ವಿನಾಯಕ ಹರಿಕಂತ್ರ, ದೇವರಾಯ ಸೈಲ್, ಸುಭಾಷ ದುರ್ಗೇಕರ್, ಮಂಜುನಾಥ ಮುದಗೇಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.