ADVERTISEMENT

ದೀಪಾವಳಿ, ಕ್ರಿಸ್‌ಮಸ್‌ಗೆ ವಿಶೇಷ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:51 IST
Last Updated 5 ಅಕ್ಟೋಬರ್ 2019, 13:51 IST

ಕಾರವಾರ: ದೀಪಾವಳಿ ಮತ್ತು ಕ್ರಿಸ್‌ಮಸ್ ಹಬ್ಬಗಳ ಸಂದರ್ಭದಲ್ಲಿಬಾಂದ್ರಾ (ಟರ್ಮಿನಲ್) ಮತ್ತು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ಕೊಂಕಣ ರೈಲ್ವೆ ತೀರ್ಮಾನಿಸಿದೆ.

82909 ಸಂಖ್ಯೆಯ‘ಸುವಿಧಾ ಸ್ಪೆಷಲ್’ ಅ.22, 29ರಂದು ಹಾಗೂ 09009 ವಿಶೇಷ ರೈಲು ಅ.24 ಮತ್ತು 31ರಂದು ಬಾಂದ್ರಾದಿಂದ ಮಂಗಳೂರಿಗೆ ಸಂಚರಿಸಲಿವೆ. ಅದೇ ರೀತಿ,09009 ಸಂಖ್ಯೆಯ ವಿಶೇಷ ರೈಲು ನ.5 ಮತ್ತು 12ರಂದು ಹೊರಡಲಿದೆ. ಇವು ರಾತ್ರಿ 11.55ಕ್ಕೆ ಹೊರಟು ಮರುದಿನ ಸಂಜೆ 7.45ಕ್ಕೆ ಮಂಗಳೂರು ತಲುಪಲಿವೆ.

ಮಂಗಳೂರಿನಿಂದ09010 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್‌ನಿಂದ ಅ.23, 30, ನ.6, 13, ಡಿ.25 ಹಾಗೂ ಜ.1ರಂದು ಸಂಚರಿಸಲಿವೆ. ಮಂಗಳೂರಿನಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಸಂಜೆ 7.30ಕ್ಕೆ ಬಾಂದ್ರಾಕ್ಕೆ ತಲುಪಲಿವೆ.

ADVERTISEMENT

ಇವುಗಳಿಗೆ ವಿಶೇಷ ಪ್ರಯಾಣ ದರ ನಿಗದಿ ಮಾಡಲಾಗಿದೆ. ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರಿನಲ್ಲಿ ನಿಲುಗಡೆಯಿದೆ. ಮೂರು ಸಾಮಾನ್ಯ, 11 ಸ್ಲೀಪರ್ ಸೇರಿದಂತೆ ಒಟ್ಟು 22 ಬೋಗಿಗಳು ಇವುಗಳಲ್ಲಿ ಇರಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.