ADVERTISEMENT

ಕುಮಟಾ: ಬೈಕ್ ಹಿಂದೆ ಕುಳಿತ ಯುವಕ ನಿಯಂತ್ರಣ ತಪ್ಪಿ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 3:59 IST
Last Updated 25 ಜನವರಿ 2026, 3:59 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕುಮಟಾ:  ಪಟ್ಟಣದ ಮಹಾಸತಿ ದೇವಾಲಯ ಬಳಿ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಶುಕ್ರವಾರ  ಬೈಕ್ ಹಿಂದೆ ಕುಳಿತ ಯುವಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

ADVERTISEMENT

ತಾಲ್ಲೂಕಿನ ಹೊಲನಗದ್ದೆಯ ಶಿಲ್ಪಿ ಕಿರಣ ಪಟಗಾರ (23) ಮೃತ. ಈತ ಶುಕ್ರವಾರ ರಾತ್ರಿ ತಾಲ್ಲೂಕಿನ ಮಿರ್ಜಾನಿನಿಂದ ತನ್ನ ಸ್ನೇಹಿತ ವಿಕಾಸ ಪಟಗಾರ (19) ಜೊತೆಗೆ ಬೈಕ್‌ನಲ್ಲಿ ಹೊರಟಿರುವಾಗ  ಕಿರಣ ಬಿದ್ದಿದ್ದಾರೆ.  ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಎಸ್.ಐ ರವಿ ಗುಡ್ಡಿ ಮಾಹಿತಿ ನೀಡಿದ್ದಾರೆ.

ವ್ಯಕ್ತಿ ರಕ್ಷಣೆ:

ಕುಮಟಾ: ಪಟ್ಟಣದ ಸರೋವರ ಫ್ಯಾಮಿಲಿ ರೆಸ್ಟೊರೆಂಟ್‌ನ ಸುಮಾರು 10 ಅಡಿ ಅಗಲ 55 ಅಡಿ ಆಳದ 15 ಅಡಿ ನೀರು ಇದ್ದ ತೆರೆದ ಬಾವಿಯಲ್ಲಿ ಇಳಿದು ಪಂಪ್ ಮೇಲೆತ್ತುವಾಗ ಅಸ್ವಸ್ಥಗೊಂಡ ಆರುಣ ನಾಯಕ (62) ಎನ್ನುವ ವ್ಯಕ್ತಿಯನ್ನು ಸ್ಥಳೀಯ ಅಗ್ನಿಶಾಮಕ ದಳ ಸಿಬ್ಬಂದಿ ತಂಡ ರಕ್ಷಿಸಿದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಟಿ.ಎನ್. ಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.