ADVERTISEMENT

ದೂದ್‍ಸಾಗರ: ರೈಲು ಹಳಿ ಮೇಲೆ ಭೂಕುಸಿತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 16:21 IST
Last Updated 17 ಜುಲೈ 2023, 16:21 IST
ಕರ್ನಾಟಕ–ಗೋವಾ ಗಡಿಭಾಗದಲ್ಲಿರುವ ದೂದ್‍ಸಾಗರ ಜಲಪಾತದ ಸಮೀಪ ಭೂಕುಸಿತ ಉಂಟಾಗಿ ದೊಡ್ಡ ಗಾತ್ರದ ಕಲ್ಲುಗಳು ರೈಲು ಹಳಿಗಳ ಮೇಲೆ ಬಿದ್ದಿದ್ದವು
ಕರ್ನಾಟಕ–ಗೋವಾ ಗಡಿಭಾಗದಲ್ಲಿರುವ ದೂದ್‍ಸಾಗರ ಜಲಪಾತದ ಸಮೀಪ ಭೂಕುಸಿತ ಉಂಟಾಗಿ ದೊಡ್ಡ ಗಾತ್ರದ ಕಲ್ಲುಗಳು ರೈಲು ಹಳಿಗಳ ಮೇಲೆ ಬಿದ್ದಿದ್ದವು   

ಕಾರವಾರ: ಪಶ್ಚಿಮ ಘಟ್ಟ ಭಾಗದ ಅಲ್ಲಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್‍ಸಾಗರ ಜಲಪಾತದ ಸಮೀಪ ರೈಲ್ವೆ ಸುರಂಗ ಮಾರ್ಗದ ಎದುರು ಹಳಿಗಳ ಮೇಲೆ ಸೋಮವಾರ ನಸುಕಿನ ಜಾವ ಭೂಕುಸಿತ ಸಂಭವಿಸಿದೆ.

ಬೃಹತ್ ಗಾತ್ರದ ಕಲ್ಲುಗಳು, ಮಣ್ಣಿನ ರಾಶಿ ಬಿದ್ದು ಹಳಿಗಳನ್ನು ಮುಚ್ಚಿ ಹಾಕಿತ್ತು. ನೈರುತ್ಯ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆರವು ಕಾರ್ಯ ನಡೆಸಿದರು.

‘ರೈಲು ಸಂಚಾರಕ್ಕೆ ಶೀಘ್ರ ಅನುವು ಮಾಡಿಕೊಟ್ಟಿರುವುದರಿಂದ ಸಂಚಾರ ವ್ಯತ್ಯಯ ಆಗಿಲ್ಲ’ ಎಂದು ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ‌.‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.