ADVERTISEMENT

ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸುವಾಗ ಆಘಾತ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 8:32 IST
Last Updated 5 ಜುಲೈ 2022, 8:32 IST
ತಾಟವಾಳದಲ್ಲಿ ವಿದ್ಯುತ್ ತಂತಿ ಕಡಿದು ರಾಜ್ಯ ಹೆದ್ದಾರಿ ಮೇಲೆ ಬಿದ್ದಿರುವುದು
ತಾಟವಾಳದಲ್ಲಿ ವಿದ್ಯುತ್ ತಂತಿ ಕಡಿದು ರಾಜ್ಯ ಹೆದ್ದಾರಿ ಮೇಲೆ ಬಿದ್ದಿರುವುದು   

ಯಲ್ಲಾಪುರ: ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಮನೆ ಎಂಬಲ್ಲಿ ಮಂಗಳವಾರ ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ.

ಪಟ್ಟಣ ವ್ಯಾಪ್ತಿಯ ಸಬಗೇರಿಯ ಆದಂಸಾಬ್ ಇ ಶೇಖ್ (75) ಮೃತಪಟ್ಟವರು. ಅವರು ಉಮ್ಮಚಗಿಯ ಹುಣಸೇಮನೆಯಲ್ಲಿ ಅತಿಕ್ರಮಣ ಜಮೀನಿನಲ್ಲಿರುವ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸರಿಪಡಿಸಲು ಸಮೀಪದ ವಿದ್ಯುತ್ ಕಂಬವನ್ನು ಏರಿದ್ದರು. ಸರ್ವಿಸ್ ಲೈನ್ ಸರಿಪಡಿಸುತ್ತಿದ್ದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಗಡಿಭಾಗ ತಾಟವಾಳ ಬಳಿ 11 ಕೆ.ವಿ. ವಿದ್ಯುತ್ ತಂತಿಯ ಕಂಬ ಮುರಿದು ರಸ್ತೆಯ ಮೇಲೆ ಬಿದ್ದಿದೆ. ಇದರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಯಲ್ಲಾಪುರ- ಶಿರಸಿ ರಸ್ತೆಯಲ್ಲಿ ಬೇಡ್ತಿ ಬಳಿ ರಾಜ್ಯ ಹೆದ್ದಾರಿಯ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಸ್ವಲ್ಪ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.