ADVERTISEMENT

ಶಿರಸಿ: ಮಾರಿಕಾಂಬಾ ರಥ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:25 IST
Last Updated 8 ಮಾರ್ಚ್ 2022, 16:25 IST
ಮಾರಿಕಾಂಬಾ ದೇವಿ ರಥ ನಿರ್ಮಾಣಕ್ಕೆ ಬಳಸುವ ಮರದ ತುಂಡುಗಳನ್ನು ಮೆರವಣಿಗೆ ಮೂಲಕ ಸಾಗಿಸಲಾಯಿತು.
ಮಾರಿಕಾಂಬಾ ದೇವಿ ರಥ ನಿರ್ಮಾಣಕ್ಕೆ ಬಳಸುವ ಮರದ ತುಂಡುಗಳನ್ನು ಮೆರವಣಿಗೆ ಮೂಲಕ ಸಾಗಿಸಲಾಯಿತು.   

ಶಿರಸಿ: ಮಾರಿಕಾಂಬಾ ದೇವಿಯನ್ನು ಜಾತ್ರಾ ಗದ್ದುಗೆಗೆ ಕರೆದೊಯ್ಯುವ ರಥ ನಿರ್ಮಾಣ ಪ್ರಕ್ರಿಯೆ ತಾರಿಮರದ ತುಂಡುಗಳಿಗೆ ಮಂಗಳವಾರ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಂಡಿತು.

ಮಾ.4 ರಂದು ಎಸಳೆ ಗ್ರಾಮದಲ್ಲಿ ರಥ ನಿರ್ಮಾಣಕ್ಕೆ ಬಳಸುವ ಮರಕ್ಕೆ ಕಚ್ಚು ಹಾಕಿ ತುಂಡರಿಸಲಾಗಿತ್ತು. ಮರದ ತುಂಡುಗಳನ್ನು ಸಂಪ್ರದಾಯಬದ್ಧವಾಗಿ ಬಾಬುದಾರರು ಎತ್ತಿನಬಂಡಿಯ ಮೂಲಕ ಮೆರವಣಿಗೆಯಲ್ಲಿ ಕರೆತಂದರು.

ಸಿಂಗಾರಗೊಂಡಿದ್ದ ಎತ್ತುಗಳು ಬಂಡಿಯಲ್ಲಿ ಇಡಲಾಗಿದ್ದ ಮರದ ತುಂಡುಗಳನ್ನು ಎಳೆದು ತಂದವು. ಅವುಗಳಿಗೆ ದೇವಸ್ಥಾನದ ಎದುರು ಪೂಜೆ ಸಲ್ಲಿಸಲಾಯಿತು. ಬಳಿಕ ಮರವನ್ನು ರಥ ಸಿದ್ಧಪಡಿಸುವ ಸಲುವಾಗಿ ಬಡಗಿಗಳಿಗೆ ಹಸ್ತಾಂತರಿಸಲಾಯಿತು.

ADVERTISEMENT

ದೇವಸ್ಥಾನದ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ, ಉಪಾಧ್ಯಕ್ಷ ಸುಧೀಶ ಜೋಗಳೆಕರ, ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರ ಪ್ರಮುಖರು, ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.