ADVERTISEMENT

ಉತ್ತರ ಕನ್ನಡ: ಮಾರಿಕಾಂಬೆ ಪುನರ್ ಪ್ರತಿಷ್ಠೆ

ಸರಳವಾಗಿ ನಡೆದ ಧಾರ್ಮಿಕ ಕಾರ್ಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 12:46 IST
Last Updated 26 ಮಾರ್ಚ್ 2020, 12:46 IST
ಶಿರಸಿಯಲ್ಲಿ ಮಾರಿಕಾಂಬೆ ಪುನರ್ ಪ್ರತಿಷ್ಠಾಪನೆ ಬುಧವಾರ ನಡೆಯಿತು
ಶಿರಸಿಯಲ್ಲಿ ಮಾರಿಕಾಂಬೆ ಪುನರ್ ಪ್ರತಿಷ್ಠಾಪನೆ ಬುಧವಾರ ನಡೆಯಿತು   

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ಯುಗಾದಿ ಹಬ್ಬದಂದು ನಡೆಯಿತು.

ಬೆಳಿಗ್ಗೆ 8.30ಕ್ಕೆ ಆರಂಭಗೊಂಡ ಪೂಜಾ ಕಾರ್ಯಕ್ರಮ 10 ಗಂಟೆಯವರೆಗೆ ನಡೆಯಿತು. ಕೊರೊನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 144ನೇ ಕಲಂ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ, ಧರ್ಮದರ್ಶಿ ಮಂಡಳಿ ಸದಸ್ಯರು, ಕೆಲವೇ ಬಾಬುದಾರರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಬಾಬುದಾರ ಪ್ರಮುಖ ಜಗದೀಶ ಗೌಡ, ಅಜಯ ನಾಡಿಗ್ ಇತರರು ಇದ್ದರು. ನಿರ್ಬಂಧ ಇದ್ದ ಕಾರಣ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು.

ಸಂಪ್ರದಾಯದಂತೆ, ಮಾರಿಕಾಂಬಾ ಜಾತ್ರೆಯ ಕೊನೆಯ ದಿನ ದೇವಿಯ ವಿಸರ್ಜನೆ ನಡೆದ ಮೇಲೆ ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದರು. ಈ ಬಾರಿ ಸಿಪಿಐ ಪ್ರದೀಪ ನೇತೃತ್ವದಲ್ಲಿ ಪೊಲೀಸರು, ಮುನ್ನೆಚ್ಚರಿಕೆವಹಿಸಿ, ಜನ ಸೇರುವುದನ್ನು ನಿಯಂತ್ರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.