ಅಂಕೋಲಾ: ‘ಮನೆಯಲ್ಲಿಯೇ ನಮಗೆ ನೂರಾರು ಗಿಡಮೂಲಿಕೆ ಔಷಧಗಳು ಸಿಗುತ್ತವೆ. ಅದನ್ನು ನಾವು ಅರ್ಥೈಸಿಕೊಂಡು ಉಪಯೋಗಿಸುವ ಮಹತ್ವ ತಿಳಿದುಕೊಳ್ಳುವಂತಾಗಬೇಕು’ ಎಂದು ಎಲ್ಐಸಿ ಅಭಿವೃದ್ಧಿ ಅಧಿಕಾರಿ ಸಾಯೀಶಕುಮಾರ ಕೇಣಿಕರ ಹೇಳಿದರು.
ಪತಂಜಲಿ ಯೋಗ ಸಮಿತಿ ಮತ್ತು ಅಂಕೋಲಾದ ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಪಟ್ಟಣದ ಗಣಪತಿ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಗಿಡಮೂಲಿಕೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಮದ್ದು, ಗಿಡ ಮೂಲಿಕೆಗಳ ಮತ್ತು ನಾಟಿ ಔಷಧಿಯ ಒಂದು ಭಾಗವಾಗಿದೆ. ನಾವು ಸೇವಿಸುವ ಆಹಾರವು ಔಷಧೀಯ ಗುಣಗಳನ್ನು ಹೊಂದಿರಬೇಕು ಎಂದು ಹೇಳಿದರು.
ಜೈಹಿಂದ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜಯ ಕಾಮತ ಮಾತನಾಡಿ, ‘ನಾವು ಇಂದು ಪಾಶ್ಚಾತ್ಯರ ಅನುಕರಣೆಯಿಂದ ಭಾರತೀಯ ಆರ್ಯುವೇದ ಪದ್ಧತಿ, ನಾಟಿ ವೈದ್ಯ ಪದ್ಧತಿ ನಾಶ ಮಾಡುತ್ತಿದ್ದೇವೆ. ವಿದೇಶಿಗರು ನಮ್ಮ ಆಯುರ್ವೇದದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಾವು ಮಾತ್ರ ಅದನ್ನು ಮರೆಯುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪತಂಜಲಿ ಸಂಸ್ಥೆಯ ಮೂಲಕ ಮತ್ತೆ ಹಿಂದಿನ ಆರ್ಯುವೇದ, ನಾಟಿ ವೈದ್ಯ ಪದ್ಧತಿ ಮುನ್ನಲೆಗೆ ಬರುತ್ತಿದೆ’ ಎಂದರು.
ಭಾರತ ಸ್ವಾಭಿಮಾನ ಟ್ರಸ್ಟ್‌ನ ಡಾ.ವಿಜಯದೀಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತಂಜಲಿ ಯೋಗ ಸಮಿತಿ ಪ್ರಭಾರ ವಿ.ಕೆ. ನಾಯರ, ಸ್ಮಿತಾ ನಾಯ್ಕ, ಯೋಗ ಪಟುಗಳಾದ ಎಚ್.ಕೆ. ನಾಯ್ಕ, ರಾಮಣ್ಣ, ನಿರುಪಮಾ ಅಂಕೋಲೇಕರ, ನಾಗರಾಜ ಬೋವಿ, ಯೋಗ ಸಮಿತಿ ಪ್ರಭಾರ ವಿನಾಯಕ ಗುಡಿಗಾರ, ಪ್ರಸಾದ ಕೇಣಿಕರ, ಶಿಲ್ಪಾ ಕುರ್ಡೇಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.