ಸಿದ್ದಾಪುರ: ‘ರೈತರು ಹೈನುಗಾರಿಕೆಯಿಂದ ಹೆಚ್ಚಿನ ಹಾಲು ಉತ್ಪಾದನೆ ಮಾಡಿ ಲಾಭ ಗಳಿಸಬೇಕಾದರೆ ಹಸಿ ಮೇವಿನ ಬಳಕೆ ಮಾಡಬೇಕು. ಈ ಕುರಿತು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಸಲಾಗುತ್ತದೆ’ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಕಳಸದ ಹೇಳಿದರು.
ಪಟ್ಟಣದ ಹೊಸೂರಿನಲ್ಲಿರುವ ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಉಪವಿಭಾಗದ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಧಾರವಾಡ ಹಾಲು ಒಕ್ಕೂಟ ಈಗ ಉತ್ತಮ ಸ್ಥಿತಿಯಲ್ಲಿದೆ. ಒಕ್ಕೂಟದಿಂದ ಸಂಘಗಳಿಗೆ ಸಿಗಬೇಕಾದ ಸೌಲಭ್ಯ ನೀಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆ ಸಂಪದ್ಬರಿತವಾಗಿದ್ದು ಹಾಲಿನ ಉತ್ಪಾದನೆ ಕುರಿತು ಮಾಹಿತಿ ಕಾರ್ಯಾಗಾರಗಳು ನಡೆಯುತ್ತಿರಬೇಕು ಎಂದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ ಮಾತನಾಡಿದರು. ಕಡಕೇರಿ ಹಾಲು ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೆಗಾರ, ಡಾ.ರಾಕೇಶ, ಡಾ.ವಿನಾಯಕ ಬಿರಾದಾರ, ವಿಸ್ತರಣಾಧಿಕಾರಿ ಚಂದನ ನಾಯ್ಕ ಉಪಸ್ಥಿತರಿದ್ದರು.
ಬಾಳೇಸರ , ಶಿರಳಗಿ, ಬಿಳಗಿ, ಗೊಳಿಮಕ್ಕಿ ಸಂಘದ ಅಧ್ಯಕ್ಷರುಗಳು ಹಾಗೂ ಹಾರ್ಸಿಕಟ್ಟ ಹಾಲು ಸಂಘದ ಕಾರ್ಯದರ್ಶಿ ಮಾತನಾಡಿದರು.
ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಅವರನ್ನು ಸನ್ಮಾನಿಸಲಾಯಿತು. ಭಾರತಿ ಭಟ್ಟ ಕವಲಕೊಪ್ಪ ಪ್ರಾರ್ಥಿಸಿದರು. ಶಿರಸಿ ಉಪವಿಭಾಗದ ವ್ಯವಸ್ಥಾಪಕ ಎಸ್.ಎಸ್.ಬಿಜ್ಜೂರು ಕಾರ್ಯಕ್ರಮ ನಿರ್ವಹಿಸಿದರು. ವಿಸ್ತರಣಾಧಿಕಾರಿ ಪ್ರಕಾಶ ಕೆ. ಸ್ವಾಗತಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.