ADVERTISEMENT

ಸ್ವಾವಲಂಬನೆಗೆ ಶಿಕ್ಷಣ ದಾರಿ: ಶಾಸಕ ಸತೀಶ ಸೈಲ್

​ಪ್ರಜಾವಾಣಿ ವಾರ್ತೆ
Published 31 ಮೇ 2025, 13:55 IST
Last Updated 31 ಮೇ 2025, 13:55 IST
ಕಾರವಾರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಶನಿವಾರ ಶಾಸಕ ಸತೀಶ ಸೈಲ್ ಉದ್ಘಾಟಿಸಿದರು
ಕಾರವಾರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಶನಿವಾರ ಶಾಸಕ ಸತೀಶ ಸೈಲ್ ಉದ್ಘಾಟಿಸಿದರು   

ಕಾರವಾರ: ‘ಶಿಕ್ಷಣ ಸ್ವಾವಲಂಬನೆಯೊಂದಿಗೆ ಬದುಕಲು ದಾರಿ ಮಾಡಿಕೊಡುತ್ತದೆ. ಮಹಿಳೆಯರು ಸುಶಿಕ್ಷಿತರಾದರೆ ಸಮಾಜವೂ ಪರಿಣಾಮಕಾರಿ ಸುಧಾರಣೆ ಕಾಣುತ್ತದೆ’ ಎಂದು ಶಾಸಕ ಸತೀಶ ಸೈಲ್ ಹೇಳಿದರು.

ಇಲ್ಲಿನ ಡಿಪ್ಲೊಮಾ ಕಾಲೇಜು ಕಟ್ಟಡದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳಾ ಕಾಲೇಜಿಗೆ ಹೊಸ ಕಟ್ಟಡವನ್ನು 2017–18ರಲ್ಲಿಯೇ ಮಂಜೂರು ಮಾಡಿಸಿಕೊಂಡು ಬಂದಿದ್ದೆ. ಐದು ವರ್ಷಗಳ ಬಳಿಕ ಕಟ್ಟಡ ನಿರ್ಮಾಣ ಕೆಲಸ ಆರಂಭಗೊಂಡಿತ್ತು. ಕಾಲೇಜಿಗೆ ಅಗತ್ಯವಿರುವ ಕಾಂಪೌಂಡ್, ಹೆಚ್ಚುವರಿ ಕೊಠಡಿಗಳನ್ನು ಶೀಘ್ರದಲ್ಲಿ ಮಂಜೂರು ಮಾಡಿಸಲಾಗುವುದು’ ಎಂದರು.

ADVERTISEMENT

ಈ ಕಾರ್ಯಕ್ರಮಕ್ಕೆ ಮುನ್ನ ಅವರು ನೂತನವಾಗಿ ನಿರ್ಮಾಣಗೊಂಡ ಲೋಕೋಪಯೋಗಿ ಇಲಾಖೆಯ ಸರ್ಕಿಟ್ ಹೌಸ ಕಟ್ಟಡ ಉದ್ಘಾಟಿಸಿದರು.

ತಹಶೀಲ್ದಾರ್‌ ನಿಶ್ಚಲ್ ನೊರ‍್ಹೋನಾ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಪಿಡಬ್ಲ್ಯೂಡಿ ಇಇ ಎಚ್.ಆರ್. ಚಂದ್ರಶೇಖರ್, ಎಇಇ ರಾಮು ಅರ್ಗೇಕರ್, ಮಹಿಳಾ ಕಾಲೇಜಿನ ಪ್ರಾಚಾರ್ಯ ವಿ.ಜಿ. ಗಣೇಶ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.