ADVERTISEMENT

ರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆ: ನೇಹಾಗೆ 4ನೇ ಸ್ಥಾನ

19 ಉದ್ದದ ಗಂಗಾನದಿ ಈಜು ಸ್ಪರ್ಧೆ: ವಿದ್ಯಾರ್ಥಿನಿ ಸಾಧನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 13:52 IST
Last Updated 10 ಸೆಪ್ಟೆಂಬರ್ 2024, 13:52 IST
ನೇಹಾ ಸಣಬಡ್ತಿ
ನೇಹಾ ಸಣಬಡ್ತಿ   

ಕುಮಟಾ: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಈಚೆಗೆ ಪಶ್ಚಿಮ ಬಂಗಾಲದ ಮುರ್ಶಿದಾಬಾದ್‌ನ ಗಂಗಾ ನದಿಯಲ್ಲಿ ಆಯೋಜಿಸಿದ್ದ ಮಹಿಳೆಯರ 19 ಕಿ.ಮೀ. ದೂರದ ರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆಯಲ್ಲಿ ನೇಹಾ ಸಣಬಡ್ತಿ (19 ವರ್ಷ) 4ನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.

ಸದ್ಯ ಕೋಲ್ಕತ್ತದಲ್ಲಿ ನೆಲೆಸಿರುವ ಕುಮಟಾ ಮೂಲದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನೇಹಾ ಸಣಬಡ್ತಿ ಕೋಲ್ಕತ್ತಾದಲ್ಲಿ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನಾಗರಾಜ ಸಣಬಸ್ತಿ ಅವರ ಪುತ್ರಿ. ಮುರ್ಶಿದಾಬಾದ್‌ನ ಗಂಗಾ ಹಾಗೂ ಭಾಗೀರಥಿ ನದಿಯ ಸಂಗಮ ಪ್ರದೇಶದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಐದು ಬಹುಮಾನ ಇಡಲಾಗಿತ್ತು.

ನೇಹಾ 19 ಕಿ.ಮೀ. ದೂರವನ್ನು 2 ತಾಸು 28 ನಿಮಿಷದಲ್ಲಿ ಈಜಿ ನಾಲ್ಕನೇ ಬಹುಮಾನ ಗಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಬಿ.ಟೆಕ್ ಎಂಜಿನಿಯರಿಂಗ್‌ 3ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾರೆ.

ADVERTISEMENT

ಈ ಹಿಂದೆ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಈಜು ತರಬೇತಿ ಪಡೆದಿದ್ದ ಅವರು, ಈಗ ಬೆಂಗಾಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ಈಜು ತರಬೇತುದಾರ ಬಿಸ್ವಜಿತ್ ಚೌಧರಿ ನೇಹಾ ತರಬೇತುದಾರರಾಗಿದ್ದಾರೆ.

ಶಾಲಾ ದಿನಗಳಲ್ಲಿ ಕುಮಟಾ ಪಟ್ಟಣದ ವಿಷ್ಣುತೀರ್ಥ ಕೆರೆಯಲ್ಲಿ ಈಜು ಕಲಿತಿದ್ದ ನೇಹಾ ದೇಶದ ಅತಿ ದೊಡ್ಡ ಗಂಗಾ ನದಿಯಲ್ಲಿ ಈಜಿ ಸಾಧನೆ ಮಾಡಿರುವುದು ವಿಶೇಷ' ಎಂದು ನೇಹಾ ತಂದೆ ನಾಗರಾಜ ಸಣಬಡ್ತಿ ಖುಷಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.