ADVERTISEMENT

ಕಾರವಾರ ಶಾಲೆ ದುರಸ್ತಿಗೆ ಅಧಿಕಾರಿಗಳ ಭರವಸೆ

ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:20 IST
Last Updated 19 ಜುಲೈ 2020, 16:20 IST
ಕಾರವಾರ ತಾಲ್ಲೂಕಿನ ದೇವಳಮಕ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಸಾಮಗ್ರಿಯನ್ನು ಸುರಕ್ಷಿತವಾಗಿರುವ ಕೊಠಡಿಗೆ ಭಾನುವಾರ ಸ್ಥಳಾಂತರಿಸಲಾಯಿತು
ಕಾರವಾರ ತಾಲ್ಲೂಕಿನ ದೇವಳಮಕ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ ಸಾಮಗ್ರಿಯನ್ನು ಸುರಕ್ಷಿತವಾಗಿರುವ ಕೊಠಡಿಗೆ ಭಾನುವಾರ ಸ್ಥಳಾಂತರಿಸಲಾಯಿತು   

ಕಾರವಾರ: ತಾಲ್ಲೂಕಿನ ದೇವಳಮಕ್ಕಿಯಲ್ಲಿ ಶನಿವಾರ ಭಾರಿ ಮಳೆಗೆ ಗೋಡೆ ಕುಸಿದು ಬಿದ್ದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

ಶಾಲೆಯಲ್ಲಿದ್ದ ಪಠ್ಯ ಹಾಗೂ ಇತರ ಕಲಿಕಾ ಸಾಮಗ್ರಿಯನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸಲಾಯಿತು. ಅಲ್ಲದೇ ಶಾಲೆಯ ಕೊಠಡಿಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಸಂಪನ್ಮೂಲಾಧಿಕಾರಿ (ಸಿ.ಆರ್.ಪಿ) ಮಮತಾ ಬಂಟ್ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಜ್ವಲ್ ಶೇಟ್ ಹಾಗೂ ಇತರ ಗ್ರಾಮಸ್ಥರಿದ್ದರು.

ಶಾಲೆಯ ಗೋಡೆಯನ್ನು 1950ರಲ್ಲಿ ಮಣ್ಣಿನಿಂದ ಮಾಡಲಾಗಿದ್ದು, ಮಳೆಯಿಂದ ನೀರು ಹೀರಿಕೊಂಡು ಶಿಥಿಲಗೊಂಡಿತ್ತು. ಶನಿವಾರ ಮಳೆಯ ಸಂದರ್ಭದಲ್ಲೇ ಗೋಡೆಯೊಂದು ಕುಸಿದು ಇಡೀ ಕಟ್ಟಡಕ್ಕೇ ಅಪಾಯ ಎದುರಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.