ADVERTISEMENT

ಕಾರವಾರ: ಅಕ್ರಮವಾಗಿ ಸಂಗ್ರಹಿಸಿದ್ದ 45 ಟನ್ ಮರಳು ಜಪ್ತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 15:19 IST
Last Updated 17 ನವೆಂಬರ್ 2021, 15:19 IST
ಕಾರವಾರ ತಾಲ್ಲೂಕಿನ ಸುಂಕೇರಿ ಸುತ್ತಮುತ್ತ ಅನಧಿಕೃತ ಮರಳು ಅಡ್ಡೆಗಳ ಮೇಲೆ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ನೇತೃತ್ವದ ತಂಡವು ಬುಧವಾರ ದಾಳಿ ನಡೆಸಿತು. ತಹಶೀಲ್ದಾರ್ ನಿಶ್ಚಲ್ ನರೋನಾ, ಸಿ.ಪಿ.ಐ ಸಿದ್ದಪ್ಪ ಬೀಳಗಿ ಇದ್ದಾರೆ
ಕಾರವಾರ ತಾಲ್ಲೂಕಿನ ಸುಂಕೇರಿ ಸುತ್ತಮುತ್ತ ಅನಧಿಕೃತ ಮರಳು ಅಡ್ಡೆಗಳ ಮೇಲೆ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ನೇತೃತ್ವದ ತಂಡವು ಬುಧವಾರ ದಾಳಿ ನಡೆಸಿತು. ತಹಶೀಲ್ದಾರ್ ನಿಶ್ಚಲ್ ನರೋನಾ, ಸಿ.ಪಿ.ಐ ಸಿದ್ದಪ್ಪ ಬೀಳಗಿ ಇದ್ದಾರೆ   

ಕಾರವಾರ: ತಾಲ್ಲೂಕಿನ ಸುಂಕೇರಿ, ನಂದನಗದ್ದಾ, ಗಾಬಿತವಾಡಾ ಹಾಗೂ ನದಿವಾಡದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 45 ಟನ್‌ಗಳಷ್ಟು ಮರಳನ್ನು, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ನೇತೃತ್ವದ ತಂಡವು ಬುಧವಾರ ಜಪ್ತಿ ಮಾಡಿತು.

ಮರಳು ಅಡ್ಡೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಅನಧಿಕೃತವಾಗಿ ಸಂಗ್ರಹಿಸಿದ್ದು ಪತ್ತೆಯಾಯಿತು. ಜಪ್ತಿ ಮಾಡಲಾದ ಮರಳನ್ನು ಸರ್ಕಾರದ ವಿವಿಧ ಕಾಮಗಾರಿಗಳಿಗೆ ಬಳಸಿಕೊಳ್ಳಲು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಇದೇವೇಳೆ, ಕಾಳಿ ನದಿ ಪಾತ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ದೋಣಿಗಳ ಮೂಲಕ ತೆರಳಿ, ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.

ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ನಿಶ್ಚಲ್ ನರೋನಾ, ಪೊಲೀಸ್ ವೃತ್ತ ನಿರೀಕ್ಷಕ ಸಿದ್ದಪ್ಪ ಬೀಳಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾಯ ಮತ್ತು ಪೋಲೀಸ್ ಇಲಾಖೆಗಳ ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.