ADVERTISEMENT

ಯುವ ಕೃಷಿಕ ವೀರೇಶ ನಾಯ್ಕಗೆ ‘ಪರಿವರ್ತನಾ ಶ್ರೀ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:33 IST
Last Updated 19 ಸೆಪ್ಟೆಂಬರ್ 2020, 16:33 IST
ಯುವ ಕೃಷಿಕ ವೀರೇಶ ನಾಯ್ಕ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘದಿಂದ ‘ಪರಿವರ್ತನಾ ಶ್ರೀ’ ಪ್ರಶಸ್ತಿಯನ್ನು ಈಚೆಗೆ ಹುಬ್ಬಳ್ಳಿಯಲ್ಲಿ ಪ್ರದಾನ ಮಾಡಲಾಯಿತು
ಯುವ ಕೃಷಿಕ ವೀರೇಶ ನಾಯ್ಕ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘದಿಂದ ‘ಪರಿವರ್ತನಾ ಶ್ರೀ’ ಪ್ರಶಸ್ತಿಯನ್ನು ಈಚೆಗೆ ಹುಬ್ಬಳ್ಳಿಯಲ್ಲಿ ಪ್ರದಾನ ಮಾಡಲಾಯಿತು   

ಕಾರವಾರ: ಯುವ ಕೃಷಿಕ ವೀರೇಶ ನಾಯ್ಕ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘದಿಂದ (ಬಿ.ಎಸ್‌.ಎನ್‌.ಡಿ.ಪಿ) ರಾಜ್ಯಮಟ್ಟದ ‘ಪರಿವರ್ತನಾ ಶ್ರೀ’ ಪ್ರಶಸ್ತಿ ಈಚೆಗೆ ಪ್ರದಾನ ಮಾಡಲಾಯಿತು.

ಅಂಕೋಲದವರಾದ ಅವರು ಎಂ.ಬಿ.ಎ ಪದವೀಧರ. ಹಳಿಯಾಳ, ಜೊಯಿಡಾ ಹಾಗೂ ಧಾರವಾಡ ಭಾಗಗಳಲ್ಲಿ ‘ಇಸ್ರೇಲ್ ಮಾದರಿ’ಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರಿಗೆ ಹುಬ್ಬಳ್ಳಿಯ ವಿದ್ಯಾನಗರ ಶಿರೂರು ಪಾರ್ಕ್‌ನ ಅಯ್ಯಪ್ಪ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ರಾಜ್ಯದಾದ್ಯಂತ ಎಂಟು ಮಂದಿಯನ್ನು ಆಯ್ಕೆ ಮಾಡಲಾಗಿತ್ತು.

ಬಿ.ಎಸ್‌.ಎನ್‌.ಡಿ.ಪಿ.ಯ ಅಧ್ಯಕ್ಷ ಸೈದಪ್ಪ ಗುತ್ತೇದಾರ, ಧಾರವಾಡ ಡಿ.ವೈ.ಎಸ್‌.ಪಿ ರವಿ ನಾಯ್ಕ, ಹಾವೇರಿ ಡಿ.ವೈ.ಎಸ್‌.ಪಿ ವಿನೋದ್ ಮುಕ್ತೇದಾರ್, ಪ್ರಮುಖರಾದ ಟಿ.ಡಿ.ನಾಯ್ಕ, ಚಂದ್ರ ಶೇಖರ್ ಡವಲಗಿ, ಆನಂದ ಪೂಜಾರಿ, ಹುಬ್ಬಳ್ಳಿ- ಧಾರವಾಡ ನಾಮಧಾರಿ ಬಿಲ್ಲವ ಈಡಿಗ ಸಮಾಜದ ಡಿ.ಎನ್.ನಾಯ್ಕ, ವಿವೇಕ ಪೂಜಾರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.