ADVERTISEMENT

ನಕಲಿ ಪೊಲೀಸನ ಪತ್ತೆಗೆ ಜಾಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 13:21 IST
Last Updated 17 ಸೆಪ್ಟೆಂಬರ್ 2019, 13:21 IST
ಲ್ಯಾಬ್‌ವೊಂದರ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ನಕಲಿ ಪೊಲೀಸನ ಚಿತ್ರ
ಲ್ಯಾಬ್‌ವೊಂದರ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ನಕಲಿ ಪೊಲೀಸನ ಚಿತ್ರ   

ಶಿರಸಿ: ಪೊಲೀಸ್ ಸಮವಸ್ತ್ರ ಧರಿಸಿ ಬಂದು ಸಿಒಡಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನಗರದ ವಿವಿಧ ರಕ್ತ ತಪಾಸಣಾ ಪ್ರಯೋಗಾಲಯಕ್ಕೆ ನುಗ್ಗಿ, ಒತ್ತಾಯಪೂರ್ವಕವಾಗಿ ದಾಖಲೆಗಳನ್ನು ಪಡೆದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.

ಕಾರವಾರ ಎಸ್ಪಿ ಕಚೇರಿಯಿಂದ ಬಂದಿರುವುದಾಗಿ ಹೇಳಿರುವ ವ್ಯಕ್ತಿ, ತನ್ನ ಹೆಸರು ಮಹೇಶ ಎಂದು ಹೇಳಿಕೊಂಡಿದ್ದಾನೆ. ಬೇರೆ ಬೇರೆ ಲ್ಯಾಬ್‌ಗಳಿಗೆ ಹೋಗಿ ಅಲ್ಲಿರುವ ದಾಖಲೆಗಳನ್ನು ಸಂಗ್ರಹಿಸಿರುವ ಈತ, ಕೆಲವರಿಗೆ ಮಾನಸಿಕ ಹಿಂಸೆ ನೀಡಿದ್ದಾನೆ. ಈತನ ನಡವಳಿಕೆ ಬಗ್ಗೆ ಸಂದೇಹ ಬಂದ ಲ್ಯಾಬಿನವರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನ ಮೇಲೆ ಬಂದ ಇನ್ನೊಬ್ಬ ವ್ಯಕ್ತಿ ಆರೋಪಿಯನ್ನು ಕರೆದುಕೊಂಡು ಹೋಗಿದ್ದಾನೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಹೆಲ್ಮೆಟ್ ಧರಿಸಿದ್ದ ನಕಲಿ ಪೊಲೀಸನ ಚಿತ್ರ ಸೆರೆಯಾಗಿದೆ. ಈತನ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸ್ತೂರಬಾ ನಗರದ ಮಹೇಶ ಹರಿಕಂತ್ರ ಅವರು ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT