ADVERTISEMENT

ಸಿಬ್ಬಂದಿಯಿಲ್ಲದೇ ಬಳಲಿದ ಆರೋಗ್ಯ ಕೇಂದ್ರ

ಕಾರವಾರ: ದೇವಳಮಕ್ಕಿ ಗ್ರಾಮಸ್ಥರಿಗೆ ಸಿಗದ ಸಮರ್ಪಕ ವೈದ್ಯಕೀಯ ಸೇವೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 15:42 IST
Last Updated 12 ಜುಲೈ 2019, 15:42 IST
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ   

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ರೀತಿಯಲ್ಲಿ ಆರೋಗ್ಯ ಸೇವೆಗಳು ಸಿಗುತ್ತಿಲ್ಲ. ತುರ್ತು ಪರಿಸ್ಥಿತಿಗಳಲ್ಲಿ ಚಿಕಿತ್ಸೆ ಪಡೆಯಲು ತುಂಬ ಸಮಸ್ಯೆಯಾಗುತ್ತಿದೆ ಎಂದುಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮೊದಲು ಎಂಬಿಬಿಎಸ್ ವೈದ್ಯರಿದ್ದರು. ಅವರು ವರ್ಗಾವಣೆಯಾದ ನಂತರ ಆಯುಷ್ ವೈದ್ಯರನ್ನು ನೇಮಕ ಮಾಡಲಾಗಿದೆ. ಕದ್ರಾ ಮತ್ತು ಕಾರವಾರದ ಬಹುತೇಕ ಮಧ್ಯಭಾಗದಲ್ಲಿರುವ ಗ್ರಾಮದಲ್ಲಿ ಆಂಬುಲೆನ್ಸ್ ಸೌಲಭ್ಯವೂ ಇಲ್ಲ. ಗ್ರಾಮದಲ್ಲಿ ಗರ್ಭಿಣಿಯರನ್ನು ಹೆರಿಗೆಗೆ ಕರೆದುಕೊಂಡು ಹೋಗಲು ಅಥವಾ ಯಾರದ್ದಾದರೂ ಆರೋಗ್ಯ ತೀರಾ ಹದಗೆಟ್ಟರೆ, ಆಂಬುಲೆನ್ಸ್ ಸುಮಾರು 30 ಕಿಲೋಮೀಟರ್ ದೂರದಿಂದ ಬರಬೇಕಿದೆ. ಅಷ್ಟರಲ್ಲಿ ರೋಗಿಯ ಸ್ಥಿತಿ ಚಿಂತಾಜನಕವಾಗಿಬಿಡುತ್ತದೆ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.

‘ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್ ವೈದ್ಯರು,ಕಾಯಂ ಶುಶ್ರೂಷಕಿ, ಕಚೇರಿ ಸಹಾಯಕರು, ಗುಮಾಸ್ತರು, ಫಾರ್ಮಸಿಸ್ಟ್ನೇಮಕ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ, ಜನಪ್ರತಿನಿಧಿಗಳಿಗೆ ಈ ಹಿಂದೆಯೇ ಮನವಿಸಲ್ಲಿಸಿದ್ದೇನೆ. ಆದರೆ, ಆರೋಗ್ಯ ಇಲಾಖೆಯಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಬಂದಿಲ್ಲ’ ಎಂದು ಬೇಸರಿಸುತ್ತಾರೆ ಗ್ರಾಮದ ಯುವಕ ಪ್ರಜ್ವಲ್ಬಾಬುರಾಯ ಶೇಟ್.

ADVERTISEMENT

‘ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ನಮ್ಮೂರು ಕುಗ್ರಾಮವಾಗಿದೆ. ಇಲ್ಲಿರುವವರಲ್ಲಿ ಬಡವರೇ ಅಧಿಕ. ಅವರಿಗೆ ಪದೇಪದೇ ನಗರಕ್ಕೆ ಹೋಗಿ ಚಿಕಿತ್ಸೆ ಪಡೆಯುವುದುಕಷ್ಟವಾಗುತ್ತದೆ. ಇದೇ ಆರೋಗ್ಯ ಕೇಂದ್ರವನ್ನುಕೆರವಡಿ, ಮಲ್ಲಾಪುರ, ಖಾರ್ಗಾ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳ ಜನರೂ ಅವಲಂಬಿಸಿದ್ದಾರೆ. ಆರೋಗ್ಯ ಸೌಲಭ್ಯ ನೀಡುವಂತೆ ಹಿಂದೊಮ್ಮೆ ಗ್ರಾಮಸ್ಥರೆಲ್ಲ ಪ್ರತಿಭಟನೆ ಮಾಡಿದೆವು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಮನವಿನೀಡಿದೆವು. ಆದರೂ ಪ್ರಯೋಜನವಾಗಲಿಲ್ಲ’ ಎಂದುಸಮಸ್ಯೆಯನ್ನು ವಿವರಿಸಿದರು.

‘ಆಂಬುಲೆನ್ಸ್‌ಮಂಜೂರಿಗೆಪ್ರಯತ್ನ’:‘ದೇವಳಮಕ್ಕಿ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಮಂಜೂರು ಮಾಡಲು ಈ ಹಿಂದೆ ಆರೋಗ್ಯ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿತ್ತು. ಗ್ರಾಮಸ್ಥರು ಮತ್ತೊಮ್ಮೆ 108 ಆಂಬುಲೆನ್ಸ್‌ಗೆ ಬೇಡಿಕೆ ಸಲ್ಲಿಸಿದರೆ ಜ್ಞಾಪಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ಸ್ಪಷ್ಟಪಡಿಸಿದರು.

‘ಆ ಗ್ರಾಮದ ಜನರುಎಲ್ಲ ಆರೋಗ್ಯ ಸೇವೆಗಳಿಗೆಕಾರವಾರಕ್ಕೇಬರಬೇಕಿದೆ. ಹಾಗಾಗಿ ದೇವಳಮಕ್ಕಿಗೆ ಗರಿಷ್ಠಸೌಲಭ್ಯ ಇರುವ 108 ಆಂಬುಲೆನ್ಸ್ ಅವಶ್ಯವಿದೆ ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಇಲಾಖೆಗೆ ಮನವರಿಕೆ ಮಾಡಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.