ಕಾರವಾರ: ಶಿರಸಿ ವಿಭಾಗದ ಅಂಚೆ ಪಿಂಚಣಿ ಅದಾಲತ್ ಜೂನ್ 16 ರಂದು ಬೆಳಿಗ್ಗೆ 11 ಗಂಟೆಗೆ ಶಿರಸಿ ವಿಭಾಗೀಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿರಸಿ ವಿಭಾಗದಲ್ಲಿ ಕಾರ್ಯನಿರ್ವಹಿಸಿ, ನಿವೃತ್ತಿಯಾದ ಪಿಂಚಣಿದಾರರ ಕುಂದು ಕೊರತೆಗಳನ್ನು ಅದಾಲತ್‌ನಲ್ಲಿ ಚರ್ಚಿಸಲಾಗುವುದು. ಅದಾಲತ್‌ಗೆ ಸಂಬಂಧಿಸಿದ ದೂರುಗಳನ್ನು ಹೊಂದಿದ್ದರೆ ಜೂನ್ 13ರ ಒಳಗೆ ಅಂಚೆ ಅಥವಾ ಇಮೇಲ್ dosirsi.ka@indiapost.gov.in ಮೂಲಕ ಕಳುಹಿಸಬಹುದು ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.