ADVERTISEMENT

ಅಂಬೇಡ್ಕರ್ ಜಯಂತಿ ಮೇ 10ಕ್ಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:14 IST
Last Updated 28 ಏಪ್ರಿಲ್ 2025, 14:14 IST

ಕಾರವಾರ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಣೆ  ಹಳಿಯಾಳದ ಪುರಭವನದಲ್ಲಿ ಮೇ.10 ರಂದು ನಡೆಯಲಿದೆ’ ಎಂದು ಭೀಮ್ ಆರ್ಮಿ ಜಿಲ್ಲಾ ಘಟಕದ ಉಸ್ತುವಾರಿ ಮೇಘರಾಜ ಮೇತ್ರಿ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದ ಅಂಗವಾಗಿ ಪ್ರಸ್ತುತ ಭಾರತದಲ್ಲಿ ಸಂವಿಧಾನದ ಮಹತ್ವ ವಿಷಯದ ಕುರಿತು ಪ್ರಬಂಧ, ಪ್ರಸ್ತುತ ಭಾರತದಲ್ಲಿ ಪ್ರಜಾಪ್ರಭುತ್ವದ ಪಾತ್ರ ವಿಷಯದಲ್ಲಿ ಭಾಷಣ, ನೂತನ ಸಂಸತ್ ಕಚೇರಿಯ ಚಿತ್ರ ರಚನೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ’ ಎಂದರು.

‘ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಉದ್ಘಾಟಿಸಲಿದ್ದಾರೆ. ಭೀಮ್ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ರಾಜಗೋಪಾಲ ಡಿ.ಎಸ್, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪಹಲ್ಗಾಮ್ ಘಟನೆ ಅಮಾನವೀಯ ಕೃತ್ಯ. ದಾಳಿ ನಡೆಸಿದವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರ ವಿಶೇಷ ಕಾಯ್ದೆ ರೂಪಿಸಿ, ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ನಿಯಮ ಜಾರಿಗೆ ತರಬೇಕು’ ಎಂದರು.

ಪದಾಧಿಕಾರಿಗಳಾದ ಅಲಿ ಆರ್.ಶೇಖ್, ಮಲಿಕ್ ಪಠಾಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.