ADVERTISEMENT

ರೈಲ್ವೆ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 16:53 IST
Last Updated 17 ಜುಲೈ 2020, 16:53 IST
ರೈಲ್ವೆಯ ಖಾಸಗೀಕರಣ ವಿರೋಧಿಸಿ ದಾಂಡೇಲಿಯ ಅಂಬೇವಾಡಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ವ್ಯಕ್ತಪಡಿಸಲಾಯಿತು
ರೈಲ್ವೆಯ ಖಾಸಗೀಕರಣ ವಿರೋಧಿಸಿ ದಾಂಡೇಲಿಯ ಅಂಬೇವಾಡಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ವ್ಯಕ್ತಪಡಿಸಲಾಯಿತು   

ಕಾರವಾರ: ಭಾರತೀಯ ರೈಲ್ವೆಯನ್ನು ವಿಭಜಿಸಿ ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ಚಿಂತನೆಯನ್ನುಜಿಲ್ಲೆಯ ವಿವಿಧೆಡೆ ಶುಕ್ರವಾರ ಖಂಡಿಸಲಾಯಿತು. ರೈಲು ನಿಲ್ದಾಣಗಳ ಬಳಿ ಸೇರಿದಸಿ.ಐ.ಟಿ.ಯುಕಾರ್ಯಕರ್ತರು ಈ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದರು.

ದೇಶವು ಕೋವಿಡ್‌ನಿಂದಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಕೋಟ್ಯಂತರ ಭಾರತೀಯರು ಮನೆಯಿಂದ ಹೊರಬರದೇ ತಮ್ಮ ಜೀವಗಳರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವುದೇಶದ ಸಾರ್ವಜನಿಕ ಸಂಪತ್ತುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ. ಈಗಾಗಲೇ ನಮ್ಮ ದೇಶದ ಕಲ್ಲಿದ್ದಲು ಗಣಿಗಳನ್ನು, ರಕ್ಷಣಾವಲಯದ ಸಂಸ್ಥೆಗಳನ್ನು, ವಿದ್ಯುತ್‌ಚ್ಛಕ್ತಿನಿಗಮಗಳನ್ನು, ಎ.ಪಿ.ಎಂ.ಸಿ.ಗಳನ್ನು ಖಾಸಗೀಕರಣ ಮಾಡಿದೆ. ಇದೇ ಮಾದರಿಯಲ್ಲಿ ರೈಲ್ವೇಯನ್ನೂ ಖಾಸಗೀಕರಣ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ109ರೈಲುನಿಲ್ದಾಣಗಳನ್ನು ಖಾಸಗಿಯವರ ಸುಪರ್ದಿಗೆ ನೀಡಿ151ಖಾಸಗಿ ರೈಲುಗಳಸಂಚಾರಕ್ಕೆ ‌ತೀರ್ಮಾನಿಸಲಾಗದೆ. ಈ ರೀತಿ ಮಾಡುವುದುಕೋಟ್ಯಂತರ ಜನರ ಮೇಲೆ ಪರಿಣಾಮ ಬೀರಲಿದೆಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.