ADVERTISEMENT

ಕನ್ನಡ ನೆಲದಲ್ಲಿ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:37 IST
Last Updated 1 ನವೆಂಬರ್ 2019, 15:37 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಕದಂಬ ಸೈನ್ಯ ಸದಸ್ಯರು, ಸಾರ್ವಜನಿಕರು ಕನ್ನಡ ರಾಜ್ಯೋತ್ಸವ ಆಚರಿಸಿದರು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಕದಂಬ ಸೈನ್ಯ ಸದಸ್ಯರು, ಸಾರ್ವಜನಿಕರು ಕನ್ನಡ ರಾಜ್ಯೋತ್ಸವ ಆಚರಿಸಿದರು   

ಶಿರಸಿ: ಕನ್ನಡಪರ ಸಂಘಟನೆ ಕದಂಬ ಸೈನ್ಯದ ವತಿಯಿಂದ ಕನ್ನಡದ ಪ್ರಥಮ ರಾಜಧಾನಿ, ತಾಲ್ಲೂಕಿನ ಬನವಾಸಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಪುರಾತನ ಮಧುಕೇಶ್ವರ ದೇವಾಲಯದ ಎದುರು ಧ್ವಜಾರೋಹಣ ಮಾಡಲಾಯಿತು.

ಸಂಘಟನೆಯ ಅಧ್ಯಕ್ಷ ಬೇಕ್ರಿ ರಮೇಶ ಧ್ವಜಾರೋಹಣ ನೆರವೇರಿಸಿದರು. ‘ಸತತ 11 ವರ್ಷಗಳಿಂದ ಕದಂಬ ಸೈನ್ಯ ಬನವಾಸಿ ರಾಜ್ಯೋತ್ಸವ ಆಚರಿಸುತ್ತಿದೆ. ಕನ್ನಡ ನಾಡು–ನುಡಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ’ ಎಂದು ಅವರು ಹೇಳಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ರೂಪಾ ನಾಯ್ಕ, ಸಂಘಟನೆ ಸಂಚಾಲಕ ಉದಯಕುಮಾರ ಕಾನಳ್ಳಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ದೇವೇಂದ್ರ ಮಾತನಾಡಿದರು. ಪ್ರಮುಖರಾದ ದೀಪಕ ಬಂಗ್ಲೆ, ಮೋಹನದಾಸ ನಾಯಕ, ಎ.ನಾಗೇಂದ್ರ, ಪರಶುರಾಮ ಶೆಟ್ಟಿ, ಪ್ರಭಾಕರ ಗೌಡ, ಗುತ್ಯಪ್ಪ ಮಾದರ ಇದ್ದರು. ಶಿಕ್ಷಕ ನಾಗರಾಜ ನಾಯ್ಕ ನಿರೂಪಿಸಿದರು. ಮುಖ್ಯ ಶಿಕ್ಷಕ ಶ್ರೀಧರ ನಾಯ್ಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT