ಯಲ್ಲಾಪುರ: ‘ತಂದೆ, ತಾಯಿ, ಗುರು, ಅತಿಥಿ ಹಾಗೂ ರಾಷ್ಟ್ರವನ್ನು ಗೌರವ ಭಾವದಿಂದ ನೋಡುವವರು ಮಾತ್ರ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ’ ಎಂದು ಕುಟುಂಬ ಪ್ರಬೋಧಿನಿಯ ರಾಷ್ಟ್ರೀಯ ಮುಖ್ಯಸ್ಥ ಸು.ರಾಮಣ್ಣ ಹೇಳಿದರು.
ಪಟ್ಟಣದ ವಿಶ್ವದರ್ಶನ ಆವಾರದಲ್ಲಿ ನಡೆಯುತ್ತಿರುವ ಭಾರತೀಯ ಜೀವನ ಶಿಕ್ಷಣ ಶಿಬಿರದಲ್ಲಿ ಮಂಗಳವಾರ ಅವರು ವಿಶೇಷ ಉಪನ್ಯಾಸ ನೀಡಿದರು.
‘ಕೆಲ ಸಮಯ ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ, ಪ್ರಾರ್ಥಿಸಬೇಕು. ತಂದೆ, ತಾಯಿಗಳನ್ನು ಪ್ರೀತಿಯಿಂದ ಗೌರವಿಸಬೇಕು. ನಮ್ಮನ್ನು ಹೊತ್ತ ಭಾರತ ಮಾತೆಯನ್ನು ಗೌರವಿಸಬೇಕು. ಮನೆ ದೇವಾಲಯದಂತಿದ್ದಾಗ ಪ್ರಹ್ಲಾದನಂತಾಗುತ್ತೇವೆ. ಇಲ್ಲವಾದರೆ ರಾಕ್ಷಸರಾಗುತ್ತೇವೆ. ಭಕ್ತಿಗೆ ಇರುವ ಶಕ್ತಿಯನ್ನು ಕನಕದಾಸರಿಂದ ಭಕ್ತಿಯಿಂದ ಅರಿಯಬಹುದು. ಇಂತಹ ಮೌಲ್ಯಯುತ ಶಿಬಿರಗಳು ಜೀವನದ ಬದಲಾವಣೆಗೆ ಪೂರಕ’ ಎಂದರು.
ಹಿರಿಯರಾದ ಸುಬ್ರಾಯ ಭಟ್ಟ ಬಗನಗದ್ದೆ, ರಾಮಕೃಷ್ಣ ಭಟ್ಟ ಕವಡಿಕೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.