ADVERTISEMENT

ಕಾರವಾರ| ಉದ್ಯೋಗದ ಆಮಿಷ ಒಡ್ಡಿ ₹75 ಲಕ್ಷ ವಂಚನೆ:ಬಂಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 15:45 IST
Last Updated 19 ಮಾರ್ಚ್ 2023, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಪ್ರಯಾಣಿಕರ ಹಡಗಿನ ಚೀಫ್ ಆಫೀಸರ್ ಹುದ್ದೆ ನೀಡುವುದಾಗಿ ನಂಬಿಸಿ ತಾಲ್ಲೂಕಿನ ಬೋಳಶಿಟ್ಟಾದ ಯುವಕನೊಬ್ಬನಿಂದ ₹75.19 ಲಕ್ಷ ಪಡೆದು ವಂಚಿಸಿದ್ದ ಯುವಕನೊಬ್ಬನನ್ನು ಇಲ್ಲಿನ ಸಿ.ಇ.ಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ದೆಹಲಿಯ ಆಜಾದ್ ಮಾರ್ಕೆಟ್ ಪ್ರದೇಶದ ನಿವಾಸಿ ಸೈಯ್ಯದ್ ಜುನೈದ್ ಉಲ್‍ಹಕ್ (26) ಬಂಧಿತ ಆರೋಪಿ. ಈತ ಬೋಳಶಿಟ್ಟಾದ ಕರುಣಾಕರ ತಳೇಕರ ಎಂಬ ಯುವಕನಿಂದ 2017ರ ಜುಲೈ 10ರಿಂದ 2022ರ ಜೂನ್ 13ರ ವರೆಗೆ ಹಂತ ಹಂತವಾಗಿ ₹75,19,138 ಮೊತ್ತ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಆನ್‍ಲೈನ್‍ನಲ್ಲಿ ಉದ್ಯೋಗ ಜಾಹೀರಾತು ನೋಡಿದ್ದ ಕರುಣಾಕರ ಅಲ್ಲಿ ನಮೂದಾಗಿದ್ದ ದೂರವಾಣಿಗೆ ಸಂಖ್ಯೆಗೆ ಸಂಪರ್ಕಿಸಿದ್ದ. ಆರೋಪಿ ಯುವಕ ಆತನನ್ನು ನಂಬಿಸಿ ಹಣ ಪಡೆದು ವಂಚಿಸಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.