ADVERTISEMENT

ಜೀವನದಲ್ಲಿ ಅನುಸರಣೆಗೆ ಸೂಕ್ತವಾದುದು ಕಲೆ

33ನೇ ‘ಸಂಕಲ್ಪ ಉತ್ಸವ’ಕ್ಕೆ ಚಾಲನೆ ನೀಡಿದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 14:46 IST
Last Updated 1 ನವೆಂಬರ್ 2019, 14:46 IST
ಯಲ್ಲಾಪುರದಲ್ಲಿ ಸಂಕಲ್ಪ ಸಂಸ್ಥೆ ನಡೆಸುತ್ತಿರುವ 33ನೇ ಸಂಕಲ್ಪ ಉತ್ಸವವನ್ನು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು
ಯಲ್ಲಾಪುರದಲ್ಲಿ ಸಂಕಲ್ಪ ಸಂಸ್ಥೆ ನಡೆಸುತ್ತಿರುವ 33ನೇ ಸಂಕಲ್ಪ ಉತ್ಸವವನ್ನು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು   

ಯಲ್ಲಾಪುರ: ‘ಕಲೆ ಇರುವುದು ನೋಡಲು ಮಾತ್ರವಲ್ಲ, ಅನುಸರಿಸಲು ಕೂಡ. ಆದರೆ, ನಾವು ಅನುಸರಣೆಯ ವಿಷಯದಲ್ಲಿ ಹಿಂದೆ ಬೀಳುತ್ತಿರುವುದು ವಿಷಾದನೀಯ’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಗಾಂಧಿ ಕುಟೀರದಲ್ಲಿಹಮ್ಮಿಕೊಳ್ಳಲಾಗಿರುವ 33ನೇ ‘ಸಂಕಲ್ಪ ಉತ್ಸವ’ಕ್ಕೆ ಗುರುವಾರ ರಾತ್ರಿ ಚಾಲನೆ ನೀಡಿ ಅವರು ಮಾತನಾಡಿದರು.

‘ಬದಲಾವಣೆಯ ಕಾಲಘಟ್ಟದಲ್ಲಿ ಬದಲಾಗದೇ ನಿರಂತರ ಮುಂದುವರಿಯುತ್ತಿರುವ ಸಂಕಲ್ಪ ಉತ್ಸವಕ್ಕೆ ಪ್ರಮೋದ ಹೆಗಡೆ ಅವರ ಸಂಕಲ್ಪವೇ ಕಾರಣವಾಗಿದೆ. ಯಕ್ಷಗಾನದಲ್ಲಿ ಆಸ್ವಾದನೆಯೊಂದಿಗೆ ಸ್ವಲ್ಪವಾದರೂ ಅನುಕರಣೆ ನಡೆಯಬೇಕು. ಯಕ್ಷಗಾನದಲ್ಲಿ ಕನ್ನಡ ಬಳಕೆಗೆ ಬದಲಾಗಿ ಅನ್ಯಭಾಷಿಕ ಪದಗಳ ಬಳಕೆಯಾದಾಗ ನಾವು ಅದನ್ನು ವಿರೋಧಿಸುತ್ತೇವೆ. ಆದರೆ, ನಿತ್ಯದ ಮಾತಿನಲ್ಲಿಇಂಗ್ಲಿಷ್ ಪದಗಳೇ ಹೆಚ್ಚು ತುಂಬಿವೆ’ ಎಂದುವಿಷಾದಿಸಿದರು.

ADVERTISEMENT

ಯಕ್ಷಗಾನ ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ‘ಅತಿಯಾದ ಪ್ರಚಾರದ, ತೋರಿಕೆಯ ನಟನೆಯಿಂದಾಗಿ ನಿಜವಾದ ಕಲಾವಿದ ಕಳೆದು ಹೋಗುತ್ತಿದ್ದಾನೆ’ ಎಂದು ಬೇಸರಿಸಿದರು.

ವಿದ್ವಾನ್ ಉಮಾಕಾಂತ ಭಟ್ ಮಾತನಾಡಿ, ‘ಪ್ರಗತಿಯ ವೇಗ ನಮ್ಮ ಸಂಸ್ಕತಿ, ಸಂಸ್ಕಾರವನ್ನು ಕೊಲ್ಲುತ್ತಿವೆ. ನಮಗೆ ಪ್ರಗತಿ ಬೇಕು ನಿಜ. ಆದರೆ, ನಮ್ಮತನವನ್ನು ಕೊಲ್ಲುವ ಪ್ರಗತಿ ಖಂಡಿತಾ ಬೇಡ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾಶೆಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರುತಿ ಹೆಗಡೆ, ರೈತ ಮುಖಂಡ ಪಿ.ಜಿ.ಭಟ್ ಬರಗದ್ದೆ, ನಾಗೇಶ ಭಾಗ್ವತ, ಜಿ.ಎಸ್.ಭಟ್ ಕಳಚೆ, ಪತ್ರಿಕಾ ವರದಿಗಾರರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಎಲ್.ಪಿ.ಭಟ್ ಗುಂಡ್ಕಲ್, ತಿರುಮಲೇಶ್ವರ ಕೆರೆಗದ್ದೆ, ಅರ್ಥದಾರಿ ಎಂ.ಎಲ್.ಹೆಗಡೆ, ‘ಸಂಕಲ್ಪ’ದ ಪ್ರಶಾಂತ ಹೆಗಡೆ, ವೆಂಕಟ್ರಮಣ ಬೆಳ್ಳಿ, ಎಂ.ಎನ್.ಹೆಬ್ಬಾರ್ ವೇದಿಕೆಯಲ್ಲಿದ್ದರು.

ಅದಿತಿ ಕೋಣೆಮನೆ ಪ್ರಾರ್ಥಿಸಿದರು. ಪದ್ಮಾ ಪ್ರಮೋದ ಹೆಗಡೆ ಗುರು ವಂದಿಸಿದರು. ವಿ.ಎಸ್ .ಭಟ್ ಕಳಚೆ ಸ್ವಾಗತಿಸಿದರು. ಪ್ರಸಾದ ಪ್ರಮೋದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರವಿ ಭಟ್ ಬರಗದ್ದೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂಮೊದಲುಮಾತೆಯರಿಂದ ಶ್ಲೋಕ ಪಠಣ ನಡೆಯಿತು. ರಾಮಚಂದ್ರ ಭಟ್ ಚಿಕ್ಯಾನಮನೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.