ಭಟ್ಕಳ: ತಾಲ್ಲೂಕಿನ ಜಾಲಿ ಕಡಲತೀರದಲ್ಲಿ ಹಡಗಿನ ಕಂಟೇನರ್ ಸಿಲುಕಿಕೊಂಡಿದೆ.
ಸುಮಾರು 70 ಮೀಟರ್ ಉದ್ದದ ಕಂಟೇನರ್ ಮಂಗಳವಾರ ನಸುಕಿನಜಾವ ಬಂದು ಬಿದ್ದಿದ್ದು, ಕಡಲತೀರಕ್ಕೆ ಅಪ್ಪಳಿಸಿದ ಹಡಗಿನ ಭಾಗ ನೋಡಲು ನೂರಾರು ಜನ ಸೇರಿದ್ದಾರೆ.
ಕೊಚ್ಚಿನ್ ಶಿಪ್ ಯಾರ್ಡ್'ಗೆ ಸೇರಿದೆ ಎನ್ನಲಾದ ಕಂಟೇನರ್ ಇದಾಗಿದ್ದು, ಗಾಳಿಯ ರಭಸಕ್ಕೆ ಆ್ಯಂಕಲ್ ತಪ್ಪಿ ದಡಕ್ಕೆ ಅಪ್ಪಳಿಸಿರಬಹುದು ಎಂದು ಕರಾವಳಿ ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.