ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಹಾಗೂ ಬಹುರೂಪಿ ಫೌಂಡೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರ ಮಾಧ್ಯಮ ಅನುಭವಗಳನ್ನು ಒಳಗೊಂಡ ‘ಬರೆಯದ ಕತೆಗಳು’ ಪುಸ್ತಕ ಹಾಗೂ ಲೇಖಕಿ ಭಾರತಿ ಹೆಗಡೆ ರಚಿತ ‘ಉಪ್ಪಾಗೆ ಹರಳು’ ಕೃತಿ ಬಿಡುಗಡೆ ಏ.16ರಂದು ಸಂಜೆ 4.30ಕ್ಕೆ ನಗರದ ನೆಮ್ಮದಿ ಕುಟೀರದಲ್ಲಿ ನಡೆಯಲಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ ಕೃತಿ ಬಿಡುಗಡೆ ಮಾಡುವರು. ಬಹುರೂಪಿ ಸಂಸ್ಥೆಯ ಸಂಸ್ಥಾಪಕ ಜಿ.ಎನ್.ಮೋಹನ ಅಧ್ಯಕ್ಷತೆ ವಹಿಸುವರು. ಬರಹಗಾರ ಸುಬ್ರಾಯ ಮತ್ತಿಹಳ್ಳಿ, ಸಮಾಜ ವಿಜ್ಞಾನಿ ಪ್ರಕಾಶ ಭಟ್ ಭಾಗವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಶಿರಸಿ ಘಟಕ, ನೆಮ್ಮದಿ ಬಳಗ, ಸಾಹಿತ್ಯ ಸಂಚಲನ, ಶಬರ ಸಂಸ್ಥೆ, ಸಾಹಿತ್ಯ ಸಿಂಚನ ಬಳಗಗಳು ಸಹಕಾರ ನೀಡಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.