ADVERTISEMENT

ಶಿರಸಿ: ಯೋಧರ ಶ್ರೇಯಸ್ಸಿಗಾಗಿ ಕಾಂಗ್ರೆಸ್‌ನಿಂದ ಮಾರಿಕಾಂಬೆಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:11 IST
Last Updated 10 ಮೇ 2025, 13:11 IST
ಪಾಕಿಸ್ಥಾನದ ಜತೆ ಕಾದಾಟದಲ್ಲಿರುವ ಭಾರತೀಯ ಯೋಧರಿಗೆ ಶ್ರೇಯಸ್ಸಾಗಲೆಂದು ಪ್ರಾರ್ಥಿಸಿ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು
ಪಾಕಿಸ್ಥಾನದ ಜತೆ ಕಾದಾಟದಲ್ಲಿರುವ ಭಾರತೀಯ ಯೋಧರಿಗೆ ಶ್ರೇಯಸ್ಸಾಗಲೆಂದು ಪ್ರಾರ್ಥಿಸಿ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು   

ಶಿರಸಿ: ಪಾಕಿಸ್ತಾನದ ಜತೆ ಕಾದಾಟದಲ್ಲಿರುವ ಭಾರತೀಯ ಯೋಧರಿಗೆ ಶ್ರೇಯಸ್ಸಾಗಲೆಂದು ಪ್ರಾರ್ಥಿಸಿ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಶನಿವಾರ ಪೂಜೆ ಸಲ್ಲಿಸಲಾಯಿತು.‌

ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆಯು ನಡೆಸುತ್ತಿರುವ ‘ಆಪರೇಷನ್ ಸಿಂಧೂರ’ ಯಶಸ್ಸಾಗಲಿ ಎಂದು ದೇವಸ್ಥಾನದಲ್ಲಿ ವಿಶೇಷ  ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು. 

ಬಳಿಕ ದೇವಸ್ಥಾನದ ದ್ವಾರದಲ್ಲಿ ಭಾರತದ ಧ್ವಜವನ್ನು ಪ್ರದರ್ಶಿಸಿ ಮಾತನಾಡಿದ ಶಾಸಕ ಭೀಮಣ್ಣ, ‘ಪಾಕಿಸ್ತಾನದ ಉಗ್ರರು ಪಹಲ್ಗಾಮದಲ್ಲಿ ನಮ್ಮ ಭಾರತೀಯರ ನೆತ್ತರು ಹರಿಸಿರುವುದು ಸಹಿಸಲಾರದ ಅಕ್ಷಮ್ಯ ಅಪರಾಧ. ಇದಕ್ಕೆ ಪ್ರತಿಕಾರವಾಗಿ ನಾವು ಪಾಕಿಸ್ತಾನಕ್ಕೆ ಊಹಿಸಲಾಗದ, ಮುಟ್ಟಿ ನೋಡಿಕೊಳ್ಳುವಂತಹ ತಕ್ಕ ಪಾಠ ಕಲಿಸುತ್ತಿದ್ದೇವೆ’ ಎಂದರು.

ADVERTISEMENT

ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಸತೀಶ ನಾಯ್ಕ, ನಾಗರಾಜ ಮುರುಡೇಶ್ವರ, ಪ್ರದೀಪ ಶೆಟ್ಟಿ, ಗಣೇಶ ದಾವಣಗೆರೆ, ಶೈಲೇಶ ಜೋಗಳೆಕರ್, ಜೋಫಿ ಪೀಟರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.