ಶಿರಸಿ: ಇಲ್ಲಿನ ಉಪ ಕಾರಾಗೃಹದಲ್ಲಿ ಪ್ರಭಾರಿ ಜೈಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೂಲತಃ ಅಂಕೋಲಾ ಅಗ್ಗರಗೋಣದ ಮಂಜುನಾಥ ನಾಯಕ ಅವರಿಗೆ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರಾಗೃಹ ಇಲಾಖೆಗೆ ಬಂದ ಪ್ರಥಮ ಮುಖ್ಯಮಂತ್ರಿ ಪದಕ ಇದಾಗಿದ್ದು, ಆಗಸ್ಟ್ 15ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಪದಕ ನೀಡಲಾಗುವುದು. ಅಗ್ಗರಗೋಣದ ಶಿಕ್ಷಕ ದಂಪತಿ ವೆಂಕಟ್ರಮಣ ಬೀರಣ್ಣ ನಾಯಕ ಹಾಗೂ ಬೀರಮ್ಮ ನಾಯಕ ಪುತ್ರರಾಗಿರುವ ಮಂಜುನಾಥ ನಾಯಕ 2008ರಲ್ಲಿ ಜಿಲ್ಲಾ ಕಾರಾಗೃಹ ಮಂಗಳೂರನಿಂದ ಕೆಲಸ ಪ್ರಾರಂಭಿಸಿದ್ದರು. ಇವರು ನಂತರ ಉಪ ಕಾರಾಗೃಹ ಯಲ್ಲಾಪುರ ಮತ್ತು ಜಿಲ್ಲಾ ಕಾರಾಗೃಹ ಕಾರವಾರದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಪ ಕಾರಾಗೃಹ ಶಿರಸಿಯಲ್ಲಿ ಪ್ರಭಾರಿ ಜೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.