
ಶಿರಸಿ: ಅರಣ್ಯವಾಸಿಗಳಿಗೆ ಪರಿಸರ ಜ್ಞಾನ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಹಮ್ಮಿಕೊಂಡ ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ಜಿಲ್ಲೆಯ 650 ಗ್ರಾಮಗಳಲ್ಲಿ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ತಾಲ್ಲೂಕಿನಲ್ಲಿ ನಡೆದ ಅಭಿಯಾನದ ವೇಳೆ ಪಾಲ್ಗೊಂಡು ಗಿಡ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಮತ್ತು ಕಾರವಾರ ತಾಲ್ಲೂಕಿನಲ್ಲಿ ಸಹಸ್ರಾರು ಗ್ರೀನ್ ಕಾರ್ಡ್ ಪ್ರಮುಖರು ಮತ್ತು ಅರಣ್ಯವಾಸಿಗಳ ಸಹಭಾಗಿತ್ವದಲ್ಲಿ ಸಕ್ರಿಯವಾಗಿ 100ಕ್ಕೂ ಹೆಚ್ಚು ತಳಿಗಳ ಗಿಡ ನೆಡುವ ಕಾರ್ಯ ನಡೆಸಲಾಯಿತು. ಜುಲೈ 5ರವರೆಗೆ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಜರುಗಿದ ಅಭಿಯಾನದಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ರಪೀಕ ಗೌಡಳ್ಳಿ,ಪ್ರಮುಖರಾದ ಸುಜಾತಾ ನಾಯ್ಕ, ನೆಹರು ಪಾಟೀಲ್, ಎಂ.ಆರ್.ನಾಯ್ಕ, ಹೇಮಂತ ನಾಯ್ಕ, ಮಾದೇವ ಹನುಮಂತ ನಾಯ್ಕ, ಕುಶಲವ ನಾಯ್ಕ, ಅಣ್ಣಪ್ಪ ನಾಯ್ಕ, ಲಕ್ಕಪ್ಪ ನಾಯ್ಕ, ಜಟ್ಟು ನಾಯ್ಕ, ಸುರೇಶ ನಾಯ್ಕ, ಗಂಗೂಬಾಯಿ ರಜಪೂತ್, ಕಲ್ಪನಾ ಪಾವಸ್ಕರ್, ಪರಮೇಶ್ವರ ಗೌಡ, ಅಕ್ಷತಾ ಗೌಡ, ಭಾರತಿ ಗೌಡ, ಹುಲಿಯಾ ಗೌಡ, ರಾಮ ಗೌಡ, ಹುಲಿಯಾ ಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.