ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲೀಯಲ್ಲಿ ಬುಧವಾರ ವೈಶಾಖ ಶುದ್ಧ ತದಿಗೆ ಅಕ್ಷಯ ತೃತೀಯಾದಂದು ನರಸಿಂಹ ಜಯಂತಿ ದಿನದಂದು ನಡೆಯುವ ರಥೋತ್ಸವದ ರಥವನ್ನು ರಥದ ಮನೆಯಿಂದ ಹೊರತುರುವ ಕಾರ್ಯ ನೆರವೇರಿತು.
ಇದೇ ವೇಳೆ ರಥಕ್ಕೆ ಇರುವ ಗಣಪತಿ ಮತ್ತು ಗರುಡ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಿತು. ಈ ನಂತರದಲ್ಲಿ ರಥವನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.