ADVERTISEMENT

ತಂಪು ಪಾನೀಯ ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ: ಡಾ.ನಮ್ರತಾ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 13:19 IST
Last Updated 8 ಜೂನ್ 2024, 13:19 IST
ಬಾಯಿ ಮತ್ತು ಹಲ್ಲುಗಳ ಆರೋಗ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ. ನಮೃತಾ ಉದ್ಘಾಟಿಸಿದರು
ಬಾಯಿ ಮತ್ತು ಹಲ್ಲುಗಳ ಆರೋಗ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ. ನಮೃತಾ ಉದ್ಘಾಟಿಸಿದರು   

ಭಟ್ಕಳ: ಹಲ್ಲುಗಳ ಕುರಿತು ತಿಳಿದುಕೊಂಡು, ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಯುವಜನತೆ ಮುಂದಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್.ಎಸ್.ಎಸ್.ಘಟಕ, ಸಾವಿತ್ರಿ ಸ್ಪೆಷಾಲಿಟಿ ಡೆಂಟಲ್ ಕೇರ್ ಭಟ್ಕಳ, ರೋಟರಿ ಕ್ಲಬ್ ಹೊಸಂಗಡಿ-ಸಿದ್ದಾಪುರ ಘಟಕದ ಸಂಯುಕ್ತಾಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ಬಾಯಿ ಮತ್ತು ಹಲ್ಲುಗಳ ಆರೋಗ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾವಿತ್ರಿ ಸ್ಪೆಷಾಲಿಟಿ ಡೆಂಟಲ್ ಕೇರ್ ಭಟ್ಕಳದ ಡಾ. ನಮ್ರತಾ ನಾಯ್ಕ ಮಾತನಾಡಿ, ಯುವಜನತೆ ತಂಪು ಪಾನೀಯವನ್ನು ಯಥೇಚ್ಛವಾಗಿ ಕುಡಿಯುವ ಮೂಲಕ ತಮ್ಮ ಹಲ್ಲಿನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಲ್ಲಿನ ಆರೋಗ್ಯದ ಕುರಿತು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಕೊಳ್ಳುವುದು ಅಗತ್ಯ. ನಿರ್ಲಕ್ಷ ಮಾಡಿದಾಗ ಹಲ್ಲುಗಳನ್ನೇ ಕೀಳಬೇಕಾದ ಪರಿಸ್ಥಿತಿ ಬರಬಹುದು ಎಂದರು.

ADVERTISEMENT

ಹಲ್ಲುಗಳ ಆರೋಗ್ಯ ರಕ್ಷಣೆಯ ಕುರಿತು ಪ್ರಾತ್ಯಕ್ಷಿತೆ ನೀಡಿದರು.

ರೆಡ್‌ಕ್ರಾಸ್ ಘಟಕದ ಸಂಚಾಲಕಿ ವೈಶಾಲಿ ಜಿ.ಆರ್., ವಿದ್ಯಾರ್ಥಿ ಪ್ರತಿನಿಧಿ ಪ್ರಸನ್ನ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ರೂಪ ಪ್ರಾರ್ಥಿಸಿದರು. ವೀಣಾ ನಾಯ್ಕ ಸ್ವಾಗತಿಸಿದರು. ವಿಜೇತ ನಾಯ್ಕ ನಿರೂಪಿಸಿದರು. ಚೈತ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.