ADVERTISEMENT

ಶಿರಸಿ: ಶಿಕ್ಷಕ ದಂಪತಿ ಪುತ್ರ ರಾಜ್ಯಕ್ಕೆ ಟಾಪರ್

​ಪ್ರಜಾವಾಣಿ ವಾರ್ತೆ
Published 19 ಮೇ 2022, 7:43 IST
Last Updated 19 ಮೇ 2022, 7:43 IST
ಚಿರಾಗ್ ಮಹೇಶ ನಾಯ್ಕ
ಚಿರಾಗ್ ಮಹೇಶ ನಾಯ್ಕ   

ಶಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಮಾರಿಕಾಂಬಾ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚಿರಾಗ್ ಮಹೇಶ ನಾಯ್ಕ 625 ಅಂಕ ಗಳಿಸಿ ಟಾಪರ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾನೆ.

ಈತ ಕುಮಟಾ ತಾಲ್ಲೂಕಿನ ಕೋನಳ್ಳಿ ಮೂಲದ ಮಹೇಶ ನಾಯ್ಕ ಮತ್ತು ಹೇಮಾವತಿ ನಾಯ್ಕ ದಂಪತಿಯ ಪುತ್ರ. ಇಬ್ಬರೂ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

'ಮಗನ ಫಲಿತಾಂಶ ನೋಡಿ ಅಚ್ಚರಿಯ ಜತೆಗೆ ಭಾವುಕರಾದೆವು. ಉತ್ತಮ ಅಂಕದ ನಿರೀಕ್ಷೆ ಇತ್ತಾದರೂ ಪೂರ್ಣ ಅಂಕ ಗಳಿಕೆಯ ಫಲಿತಾಂಶ ಸಂತಸ ನೂರ್ಮಡಿಗೊಳಿಸಿದೆ' ಎಂದು ಚಿರಾಗ್ ತಾಯಿ ಹೇಮಾವತಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ADVERTISEMENT

'ಪರೀಕ್ಷೆ ವೇಳೆಯಷ್ಟೆ ಅಲ್ಲದೆ ಪ್ರತಿದಿನದ ಪಾಠವನ್ನು ಅಂದಿಗೆ ಓದಿ ಮನನ ಮಾಡಿಕೊಳ್ಳುತ್ತಿದ್ದುದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಕೆಗೆ ನೆರವಾಯಿತು. ಜೆಇಇ ಪರೀಕ್ಷೆ ಪಾಸು ಮಾಡಿ ಐಐಟಿಯಲ್ಲಿ ವ್ಯಾಸಂಗ ಮಾಡಬೇಕೆಂಬ ಗುರಿ ಇದೆ' ಎಂದು ಟಾಪರ್ ಚಿರಾಗ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.