ADVERTISEMENT

ಶಿರಸಿ: ಭೂಕುಸಿತ ಪ್ರದೇಶಕ್ಕೆ ತಹಶೀಲ್ದಾರ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:27 IST
Last Updated 29 ಜುಲೈ 2021, 5:27 IST
ಭೂಕುಸಿತದಿಂದ ಹಾನಿಗೀಡಾದ ಶಿರಸಿ ತಾಲ್ಲೂಕಿನ ಕೆಳಗಿನಕೇರಿ ಗ್ರಾಮಕ್ಕೆ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು
ಭೂಕುಸಿತದಿಂದ ಹಾನಿಗೀಡಾದ ಶಿರಸಿ ತಾಲ್ಲೂಕಿನ ಕೆಳಗಿನಕೇರಿ ಗ್ರಾಮಕ್ಕೆ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು   

ಶಿರಸಿ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಭೂಕುಸಿತ ಸಂಭವಿಸಿದ ತಾಲ್ಲೂಕಿನ ಮತ್ತಿಘಟ್ಟಾದ ಕೆಳಗಿನಕೇರಿ ಪ್ರದೇಶಕ್ಕೆ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದರು.

ಈ ಭಾಗದಲ್ಲಿ ಪದೇ ಪದೇ ಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಅವರು ಕೂಲಂಕಷವಾಗಿ ಸ್ಥಿತಿ ಅವಲೋಕಿಸಿದರು. ಅವಘಡದಲ್ಲಿ ಹಾನಿಗೀಡಾದ ಅಡಿಕೆ ತೋಟ, ರಸ್ತೆ ಸಂಪರ್ಕ ಕಡಿತಗೊಂಡಿದ್ದನ್ನು ಪರಾಮರ್ಶಿಸಿದರು.

‘ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ಆಸ್ತಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ಸಂತ್ರಸ್ತರಿಗೆ ನೀಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.