ADVERTISEMENT

ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ತಹಶೀಲ್ದಾರ್ ಆದೇಶ

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 13:37 IST
Last Updated 29 ಆಗಸ್ಟ್ 2019, 13:37 IST
ಜಯಶ್ರೀ ಮೊಗೇರ
ಜಯಶ್ರೀ ಮೊಗೇರ   

ಭಟ್ಕಳ: ಉತ್ತರಕನ್ನಡ ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಪಡೆದುಕೊಂಡಿರುವ ಅನುಸೂಚಿತ ಜಾತಿ (ಪರಿಶಿಷ್ಟ) ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಭಟ್ಕಳದ ತಹಶೀಲ್ದಾರ್ವಿ.ಪಿ.ಕೊಟ್ರಳ್ಳಿ ಗುರುವಾರ ಆದೇಶಿಸಿದ್ದಾರೆ.

ಅಲ್ಲದೇ ತಹಶೀಲ್ದಾರ್ ಕಚೇರಿಯಿಂದ ಈ ಹಿಂದೆ ನೀಡಿದ್ದ ಪರಿಶಿಷ್ಟ ಮೊಗೇರ ಜಾತಿ ಮೂಲ ಪ್ರಮಾಣ ಪತ್ರವನ್ನು ತಕ್ಷಣ ಕಚೇರಿಗೆ ಹಿಂದಿರುಗಿಸಬೇಕು ಎಂದೂ ತಿಳಿಸಿದ್ದಾರೆ.

‘ಜಯಶ್ರೀ ಅವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಅವರುನೈಜ ಪರಿಶಿಷ್ಟರಿಗೆ ದೊರಕಬೇಕಾದ ಸರ್ಕಾರಿ ಹಾಗೂ ಇತರ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆಪರಿಶಿಷ್ಟ ‘ಮೊಗೇರ’ ಜಾತಿಗೆ ಸೇರದೇ ಹಿಂದುಳಿದ ವರ್ಗಗಳ ಪ್ರವರ್ಗ– 1ರಲ್ಲಿ ಬರುವ ಮೊಗೇರ ಜಾತಿಯವರು. ಅವರಿಗೆ ನೀಡಿರುವ ಅನುಸೂಚಿತ ಜಾತಿ ಪ್ರಮಾಣ ಪತ್ರ ರದ್ದುಪಡಿಸಬೇಕು’ ಎಂದು ಭಟ್ಕಳದ ಹಿಂದೂ ಕಾಲೊನಿಯ ನಾರಾಯಣ ಶಿರೂರ್ಎಂಬುವವರು ಹೈಕೋರ್ಟ್‌ಗೆನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ನ್ಯಾಯಾಲಯದ ಆದೇಶದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ಮರು ವಿಚಾರಣೆ ನಡೆಸಿತ್ತು. ವಿಚಾರಣೆ ಸಂದರ್ಭದಲ್ಲಿ ಜಯಶ್ರೀ ಮೊಗೇರ ಅವರು, ತಾವು ಅನುಸೂಚಿತ ಮೊಗೇರ ಜಾತಿಗೆ ಸೇರಿದವರು ಎಂದು ದಾಖಲೆಗಳನ್ನು ಸಲ್ಲಿಸಲು ವಿಫಲರಾದರು. ಹಾಗಾಗಿಉಪವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಅವರು ಜಯಶ್ರೀ ಮೊಗೇರ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಕೆಲವುದಿನಗಳ ಹಿಂದೆ ಭಟ್ಕಳದ ತಹಶೀಲ್ದಾರ್ ಅವರಿಗೆ ಆದೇಶಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಚ್ಯುತಿ?: ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಯಶ್ರೀ ಮೊಗೇರ ಅವರ ಜಿಲ್ಲಾ ಪಂಚಾಯ್ತಿ ಹುದ್ದೆಗೂ ಸಹಜವಾಗಿ ಚ್ಯುತಿ ಬರಲಿದೆ. ಈ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಅಲ್ಲದೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ಕ್ರಿಮಿನಿಲ್ ಪ್ರಕರಣ ದಾಖಲಿಸಿಕೊಂಡು ಸಮನ್ಸ್ ಜಾರಿ ಮಾಡಬಹುದು. ಅಷ್ಟರಲ್ಲಿ ಜಯಶ್ರೀ ಅವರು ಕಾರವಾರದ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದುಕೊಳ್ಳದಿದ್ದರೆ ಬಂಧನದ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳುಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.