ADVERTISEMENT

ಸತತ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ

ಥರ್ಡ್ ಐ ಡೇಟಾ ಸಂಸ್ಥೆಯ ಸಂಸ್ಥಾಪಕ ಡಿ.ಜೆ. ದಾಸ್ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 4:52 IST
Last Updated 7 ಆಗಸ್ಟ್ 2025, 4:52 IST
ಹಳಿಯಾಳದ ಕೆ.ಎಲ್‌.ಎಸ್‌ ವಿಡಿಐಟಿಯಲ್ಲಿ ನಡೆದ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ  ಅಮೆರಿಕದ ಥರ್ಡ್ ಐ ಡೇಟಾ ಸಂಸ್ಥೆಯ ಸಂಸ್ಥಾಪಕ ಡಿ.ಜೆ. ದಾಸ್ ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ್ ಸವಕರ್‌, ಉಪಾಧ್ಯಕ್ಷ ರಾಮ ಭಂಡಾರೆ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಪಾಲ್ಗೊಂಡಿದ್ದರು
ಹಳಿಯಾಳದ ಕೆ.ಎಲ್‌.ಎಸ್‌ ವಿಡಿಐಟಿಯಲ್ಲಿ ನಡೆದ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ  ಅಮೆರಿಕದ ಥರ್ಡ್ ಐ ಡೇಟಾ ಸಂಸ್ಥೆಯ ಸಂಸ್ಥಾಪಕ ಡಿ.ಜೆ. ದಾಸ್ ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ್ ಸವಕರ್‌, ಉಪಾಧ್ಯಕ್ಷ ರಾಮ ಭಂಡಾರೆ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಪಾಲ್ಗೊಂಡಿದ್ದರು   

ಹಳಿಯಾಳ: ‘ಸತತ ಪರಿಶ್ರಮ ಹಾಗೂ ಹಿರಿಯರನ್ನು ಗೌರವದಿಂದ ಕಾಣುವ ಮನೋಭಾವವಿದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಅಮೆರಿದಲ್ಲಿರುವ ಥರ್ಡ್ ಐ ಡೇಟಾ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ದಾಂಡೇಲಿ ಮೂಲದ ಡಿ.ಜೆ. ದಾಸ್ ಹೇಳಿದರು.

ಈಚೆಗೆ ಇಲ್ಲಿನ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್‌ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2025ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಅಚಲ ನಂಬಿಕೆ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದು ಮೌಲ್ಯಾಧಾರಿತ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ADVERTISEMENT

ಥರ್ಡ್ ಐ ಡೇಟಾ ಸಂಸ್ಥೆಯಿಂದ ಮಹಾವಿದ್ಯಾಲಯದ 35 ವಿದ್ಯಾರ್ಥಿಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಮೂರು ವಿದ್ಯಾರ್ಥಿಗಳಿಗೆ, ಅವರ ತಾಯಿ ಮೀನಾಕ್ಷಿ ದಾಸ್ ಅವರ ಸ್ಮರಣಾರ್ಥ ಅಂತಿಮ ವರ್ಷದ ಶೈಕ್ಷಣಿಕ ವೆಚ್ಚವನ್ನು ಸ್ಕಾಲರ್ಷಿಪ್ ರೂಪದಲ್ಲಿ ನೀಡಿದರು.

ಕೆಎಲ್‌ಎಸ್‌ ಆಡಳಿತ ಮಂಡಳಿ ಬೆಳಗಾವಿ ಘಟಕದ ಅಧ್ಯಕ್ಷ ಪ್ರದೀಪ ಸವಕರ್‌ ಮಾತನಾಡಿ, ‘ಮಹಾವಿದ್ಯಾಲಯದಲ್ಲಿ ಪದವೀಧರರಾದ ವಿದ್ಯಾರ್ಥಿಗಳು ದೇಶದ ಏಳಿಗೆಗೆ ಶ್ರಮಿಸಬೇಕು’ ಎಂದರು.

ಅಮೆರಿಕದ ಕಾಹ್ನೇಜ್ನಿಕ್‌ ಎಲ್‌ಎಲ್‌ಪಿ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡೆಬ್ರಟೋ ದಾಸ್ ಮಾತನಾಡಿ, ‘ನೂತನ ತಂತ್ರಜ್ಞಾನದ ಮೂಲಕ ಸಮಾಜೋಪಯೋಗಿ ಕಾರ್ಯ ಮಾಡುವಂತೆ ನೂತನ ಎಂಜಿನಿಯರ್‌ಗಳಿಗೆ ಕರೆ ನೀಡಿದರು. ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆಯ ತಂತ್ರಜ್ಞಾನದ ಅರಿವು ಹೊಂದಿ ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕು’ ಎಂದು ಹೇಳಿದರು.

ಮುಂಬಯಿಯ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಜಿ. ಕೇಳ್ಕರ್ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಅರಿತು ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ವಿ ಹೊಂದಬೇಕು. ಔದ್ಯೋಗಿಕ ಕ್ಷೇತ್ರದಲ್ಲಿನ ಒತ್ತಡ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು’ ಎಂದು ಹೇಳಿದರು.

ಕೆಎಲ್‌ಎಸ್‌ನ ಉಪಾಧ್ಯಕ್ಷ ರಾಮ ಭಂಡಾರೆ ಮಾತನಾಡಿ, ‘ಪುಸ್ತಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನ ಹೊಂದುವುದು ಅವಶ್ಯಕ’ ಎಂದು ಹೇಳಿದರು.

ಹಳಿಯಾಳ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಡೀನ್ ಅಕಾಡೆಮಿಕ್ ಡಾ. ಗುರುರಾಜ ಹಟ್ಟಿ . ಪ್ರೊ ಮಂಜುನಾಥ, ಪ್ರೊ. ರೋಹಿಣಿ ಕಲ್ಲೂರ್, ಪ್ರೊ. ಲಕ್ಷ್ಮಿಹಟ್ಟಿ ಹೋಳಿ, ಪ್ರೊ. ಶ್ರೀ ಗೌರಿ, ಪ್ರೊ. ಶೀತಲ್ ಎಂ. ಮಾತನಾಡಿದರು.

2025ನೇ ಸಾಲಿನಲ್ಲಿ ತರ್ಗಡೆ ಹೊಂದಿದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. 

ಹಳಿಯಾಳದ ಕೆ.ಎಲ್‌.ಎಸ್‌ ವಿಡಿಐಟಿಯಲ್ಲಿ ನಡೆದ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಗಣ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.