ADVERTISEMENT

ಜಿಂಕೆ ಬೇಟೆಯಾಡಿದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:31 IST
Last Updated 24 ಸೆಪ್ಟೆಂಬರ್ 2020, 14:31 IST
 ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಜೊಯಿಡಾದಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿರುವುದು
 ಜಿಂಕೆ ಬೇಟೆಯಾಡಿದ ಆರೋಪಿಗಳನ್ನು ಜೊಯಿಡಾದಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿರುವುದು   

ಜೊಯಿಡಾ: ತಾಲ್ಲೂಕಿನ ವಿರ್ನೋಲಿ ವಲಯದ ಜನತಾ ಕಾಲೊನಿಯಲ್ಲಿ ಜಿಂಕೆ ಬೇಟೆಯಾಡಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಸ್ಥಳೀಯರಾದ ಸಂದೀಪ (36), ಪರಶುರಾಮ ಅಡಾವ (27), ಗೋಪಾಲ ಮೇದಾರ (29) ಬಂಧಿತರು. ಆರೋಪಿಗಳಿಂದ 16 ಕೆ.ಜಿಯಷ್ಟು ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ. ಇನ್ನಷ್ಟು ಅರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಹಳಿಯಾಳ ಡಿ.ಸಿ.ಎಫ್ ಜಿ.ಆರ್.ಅಜ್ಜಯ್ಯ, ಎ.ಸಿ.ಎಫ್ ನಿಂಗಾಣಿ ಅವರ ಮಾರ್ಗದರ್ಶನದಲ್ಲಿ ವಿರ್ನೋಲಿ ವಲಯ ಅರಣ್ಯಾಧಿಕಾರಿ ಬಸವರಾಜ್, ಸಿಬ್ಬಂದಿ ರಾಮುಗೌಡ, ಬೈಲಾ, ಬಸವನ ಗೌಡ, ಪ್ರವೀಣ ಮ್ಯಾಗೇರಿ, ಶ್ರೀಶೈಲ ಬಾರ್ಲಿ, ಸಂದೀಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.