ಮುಂಡಗೋಡದಲ್ಲಿ ಶನಿವಾರ ನಡೆದ ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರು ಪಾಲ್ಗೊಂಡಿದ್ದರು
ಮುಂಡಗೋಡ: ಆಪರೇಷನ್ ಸಿಂಧೂರನಲ್ಲಿ ಭಾರತೀಯ ಸೈನಿಕರು ತೋರಿದ ಅಪ್ರತಿಮ ಹೋರಾಟವನ್ನು ಬೆಂಬಲಿಸಿ ಪಟ್ಟಣದಲ್ಲಿ ಶನಿವಾರ ತಿರಂಗಾ ಯಾತ್ರೆ ನಡೆಯಿತು.
ಪಟ್ಟಣದ ಮಾರಿಕಾಂಬಾ ದೇವಸ್ಥಾನದಿಂದ ತಿರಂಗಾ ಯಾತ್ರೆ ಆರಂಭಗೊಂಡು, ಬಸವನ ಬೀದಿ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆ ಉದ್ದಕ್ಕೂ ದೇಶ, ಸೈನಿಕ ಪರ ಜಯಘೋಷಗಳು ಮೊಳಗಿದವು. ನಂತರ ಶಿವಾಜಿ ವೃತ್ತದಲ್ಲಿ 25ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಸನ್ಮಾನಿಸಿ, ಸಿಹಿ ಹಂಚಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥ ಹರಮಲಕರ, ಶೇಖರ ಲಮಾಣಿ, ಫಣಿರಾಜ ಹದಳಗಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್. ಟಿ. ಪಾಟೀಲ, ವಿಠಲ್ ಬಾಳಂಬೀಡ, ಎಸ್. ಕೆ. ಬೋರ್ಕರ್, ಭರತರಾಜ ಹದಳಗಿ, ವಿನಾಯಕ ರಾಯ್ಕರ್, ರಾಮಣ್ಣ ಉಪ್ಪುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.