ADVERTISEMENT

ಕಾರವಾರ | ಜಿಮ್ ಉಪಕರಣ ಸೌಲಭ್ಯಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 14:51 IST
Last Updated 27 ಜೂನ್ 2025, 14:51 IST

ಕಾರವಾರ: 2025–26ನೇ ಸಾಲಿನಲ್ಲಿ ಯುವ ಶಕ್ತಿ ಕೇಂದ್ರ ಯೋಜನೆಯಡಿ ಜಿಮ್ ಉಪಕರಣಗಳ ವಿತರಣೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಕ್ರೀಡಾಂಗಣಗಳು, ಕ್ರೀಡಾ ಶಾಲೆ ಅಥವಾ ವಸತಿ ನಿಲಯ, ಸರ್ಕಾರಿ ಕಾಲೇಜುಗಳು ಮತ್ತು ಪೋಲಿಸ್ ತರಬೇತಿ ಶಾಲೆಗಳು ಈ ಸೌಲಭ್ಯ ಪಡೆಯಲು ಅರ್ಹತೆ ಹೊಂದಿವೆ. ಅಂತಹ ಸಂಸ್ಥೆಗಳು ಜುಲೈ 2 ಒಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಗತ್ಯ ಮಾಹಿತಿಗೆ ಇಲಾಖೆಯ ಕಚೇರಿ (9480886551) ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT