ಶಿರಸಿ: ನಗರದ ಬಿಡ್ಕಿ ಬಯಲು, ಶಿವಾಜಿ ಚೌಕ, ಅಂಚೆ ವೃತ್ತ ಸುತ್ತಮುತ್ತ ನಗರ ಠಾಣೆ ಪೊಲೀಸರು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿ 40ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ನಗರದ ಮಾರುಕಟ್ಟೆಗೆ ಬರುವ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳಿಗೆ ಹ್ಯಾಂಡಲ್ ಲಾಕ್ ಹಾಕದೆ ಹಾಗೂ ಕೀಗಳನ್ನು ಅಲ್ಲಿಯೇ ಬಿಟ್ಟು ಅಸುರಕ್ಷಿತವಾಗಿ ನಿಲ್ಲಿಸಿ ಹೊಗುತ್ತಿದ್ದು, ಇದನ್ನು ಗಮನಸಿ ಕಳ್ಳರು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿವೆ.
ಈ ಕಾರಣ ಶಿರಸಿ ಉಪವಿಭಾಗದ ಡಿಎಸ್ಪಿ ಗೀತಾ ಪಾಟೀಲ ಮತ್ತು ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ ಬಿ ನೇತೃತ್ವದಲ್ಲಿ ಎಎಸ್ಐಗಳಾದ ನೆಲ್ಸನ್ ಮೆಂಥಾರೋ, ಹೊನ್ನಪ್ಪ ಅಗೇರ, ಸುರೇಶ ಗೊಂಜಾಳಿ, ಸಿಬ್ಬಂದಿ ಪ್ರಶಾಂತ ಮಡಿವಾಳ, ಹನುಮಂತ ಡಿ.ಜೆ, ಸುದರ್ಶನ, ವೀಣಾ ನಾಯಕ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಹಮ್ಮಿಕೊಂಡು ಹ್ಯಾಂಡಲ್ ಲಾಕ್ ಮಾಡದೇ ಅಸುರಕ್ಷಿತವಾಗಿ ನಿಲ್ಲಿಸಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಐಎಂವಿ ಕಾಯ್ದೆಯಡಿ ದಂಡ ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.