ADVERTISEMENT

ಮನುಷ್ಯರ ಸ್ನೇಹ ಗಳಿಸಿದ ಕಾಡುಹಂದಿ!

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ಭದ್ರತಾ ಸಿಬ್ಬಂದಿ ನೀಡಿದ ಆಹಾರವನ್ನು ಕಾಡುಹಂದಿ ಸೇವಿಸುತ್ತಿರುವುದು
ಭದ್ರತಾ ಸಿಬ್ಬಂದಿ ನೀಡಿದ ಆಹಾರವನ್ನು ಕಾಡುಹಂದಿ ಸೇವಿಸುತ್ತಿರುವುದು   

ಕಾರವಾರ: ಕಾಡಿನಲ್ಲಿ ವಾಸವಿರುವ ಹಂದಿಗಳು ಗೆಡ್ಡೆ, ಗೆಣಸು ಅರಸಿಕೊಂಡು ನಾಡಿಗೆ ಬರುವುದು ಸಹಜ. ಆದರೆ, ಇಲ್ಲೊಂದು ಕಾಡುಹಂದಿ, ಮನುಷ್ಯರ ಸಹವಾಸ ಬೆಳೆಸಿಕೊಂಡಿದೆ.ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು ಕೈಯಾರೆ ನೀಡುವ ಆಹಾರವನ್ನು ನಿರಾತಂಕವಾಗಿ ಸೇವಿಸುತ್ತದೆ.

ಇದರ ವಿಡಿಯೊ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವರು ಈ ವಿಡಿಯೊವನ್ನು ತಾಲ್ಲೂಕಿನ ಬಿಣಗಾ ಸಮೀಪ ಚಿತ್ರೀಕರಿಸಲಾಗಿದೆಎಂದರೆ,ಮತ್ತೆ ಕೆಲವರು ಮಾಜಾಳಿ ಸಮೀಪವೆಂದು ಅಭಿಪ್ರಾಯಪಟ್ಟಿದ್ದಾರೆ.

ಭದ್ರತಾ ಸಿಬ್ಬಂದಿ ಹಂದಿಯನ್ನು ಕೊಂಕಣಿಯಲ್ಲಿ ಕರೆಯುತ್ತಿದ್ದಂತೆ ನಿಧಾನವಾಗಿ ಹೆಜ್ಜೆ ಹಾಕುತ್ತ ಅವರ ಬಳಿ ಬರುತ್ತದೆ. ನಂತರ ಅವರು ನೀಡುವ ಆಹಾರವನ್ನು ಸೇವಿಸಿ ಕಾಡಿಗೆ ವಾಪಸಾಗುತ್ತಿದೆ. ಅಂಜಿಕೆ ಮತ್ತು ಆಕ್ರಮಣಕಾರಿ ಸ್ವಭಾವದ ಈ ವನ್ಯಜೀವಿಯು ಮನುಷ್ಯರ ಸಹವಾಸ ಬೆಳೆಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.